ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮದ್ಯದ ನಶೆಯಲ್ಲಿ ಬಿಎಂಟಿಸಿ ಬಸ್ ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ

ನೆಲಮಂಗಲ: ಮದ್ಯದ ನಶೆಯಲ್ಲಿದ್ದ ಅಪರಿಚಿತ ಪುಂಡನೋರ್ವ ಬಿಎಂಟಿಸಿ ಬಸ್ ತಡೆದು ಬಸ್ ಚಾಲಕನ ಕೈಗೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿ ಪುಂಡಾಟ ತೋರಿದ್ದಾರೆ. ಈ ಘಟನೆ ನೆಲಮಂಗಲ ತಾಲ್ಲೂಕಿನ ಮಹಿಮಾಪುರ ಗೇಟ್ ಬಳಿ ನಡೆದಿದೆ.

ಸ್ಲೆಂಡರ್ ಬೈಕ್ನಲ್ಲಿ ಬಂದಿದ್ದ 40 ವರ್ಷದ ಅಪರಿಚಿತನೋರ್ವ ದಾಬಸ್ ಪೇಟೆ - ಯಶವಂತಪುರ ಮಾರ್ಗದ 258 DN ಬಿಎಂಟಿಸಿ ಬಸ್ ಅಡ್ಡಗಟ್ಟಿ ಟೈಮ್‌ಗೆ ಸರಿಯಾಗಿ ನೀವ್ ಯಾಕೆ ಬರಲ್ಲವೆಂದು ಬಸ್ ಚಾಲಕ ಯೋಗೇಶ್ ಅವರೊಂದಿಗೆ ಗಲಾಟೆ ಮಾಡಿ ಆತನ ಕೈಗೆ ಗಾಯಗೊಳಿಸಿ ಬಸ್ ಮಿರರ್ ಒಡೆದು ಪರಾರಿಯಾಗಿದ್ದಾನೆ.

ಈ ಕುರಿತು ಚಾಲಕ ಯೋಗೇಶ್ ಮತ್ತು ನಿರ್ವಾಹಕ ಸ್ಥಳೀಯ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ

ಅಪರಿಚಿತನ ಮೇಲೆ ಹಲ್ಲೆ, ಪ್ರಾಣ ಬೆದರಿಕೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಸಂಸ್ಥೆಗೆ ಆರ್ಥಿಕ ನಷ್ಟ ಮಾಡಿರೋದಾಗಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸ್ರು ಬೈಕ್‌ಅನ್ನು ವಶ ಪಡಿಸಿಕೊಂಡು ಅಪರಿಚಿತ ವ್ಯಕ್ತಿಗಾಗಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

02/01/2025 08:33 pm

Cinque Terre

5.96 K

Cinque Terre

0

ಸಂಬಂಧಿತ ಸುದ್ದಿ