ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ : ಬ್ರೇಕ್ ಫೇಲ್‌ ಆಗಿ ಮೊಬೈಲ್ ಅಂಗಡಿಯೊಳಗೆ ನುಗ್ಗಿದ ಆಟೋರಿಕ್ಷಾ -ಅಪಾರ ನಷ್ಟ

ನಾಪೋಕ್ಲು : ಬ್ರೇಕ್ ಫೇಲ್‌ ಆದ ಆಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮೊಬೈಲ್ ಅಂಗಡಿಯೊಳಗೆ ನುಗ್ಗಿದ ಘಟನೆ ನಾಪೋಕ್ಲು ಪಟ್ಟಣದಲ್ಲಿ ನಡೆದಿದೆ.

ನಾಪೋಕ್ಲು ಪಟ್ಟಣದಿಂದ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಆಟೋರಿಕ್ಷಾ ಬ್ರೇಕ್ ವಿಫಲಗೊಂಡು ಚಾಲಕನ ನಿಯಂತ್ರಣ ತಪ್ಪಿ ಮುಖ್ಯರಸ್ತೆಯ ತಿರುವಿನಲ್ಲಿರುವ ಮೊಬೈಲ್ ಮಳಿಗೆಯೊಳಗೆ ನುಗ್ಗಿದೆ.

ಅಪಘಾತದ ರಭಸಕ್ಕೆ ಮೊಬೈಲ್ ಮಳಿಗೆಯ ಪೀಟೋಪಕರಣಗಳು ಹಾಗೂ ಮೊಬೈಲ್ ಪರಿಕರಗಳು ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ ಎಂದು ಮೊಬೈಲ್ ಮಳಿಗೆಯ ಮಾಲೀಕ ಫಾರೂಕ್ ಮಾಹಿತಿ ನೀಡಿದ್ದಾರೆ.

ಅಪಘಾತದಿಂದ ಆಟೋರಿಕ್ಷಾಗೆ ಹಾನಿಯಾಗಿದ್ದು ಚಾಲಕ ಹಾಗೂ ಆಟೋದಲ್ಲಿದ್ದ ಪ್ರಯಾಣಿಕರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By : Shivu K
PublicNext

PublicNext

30/12/2024 07:06 pm

Cinque Terre

46.35 K

Cinque Terre

0

ಸಂಬಂಧಿತ ಸುದ್ದಿ