ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಹೆಬ್ಬಾಳ್ಕರ್, ಡಿಕೆಶಿ, ಪೊಲೀಸ್ ನಡೆ ಕುರಿತು ರಾಜ್ಯಪಾಲರಿಗೆ 8 ಪುಟಗಳ ದೂರು ಕೊಟ್ಟ ಸಿಟಿ ರವಿ

ಬೆಂಗಳೂರು : ಬೆಳಗಾವಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಪೊಲೀಸ್ ನಡೆದುಕೊಂಡ ರೀತಿಯ ಬಗ್ಗೆ ರಾಜ್ಯಪಾಲರಿಗೆ ಸಿಟಿ ರವಿ ದೂರು ನೀಡಿದ್ದಾರೆ.‌ ಖುದ್ದು ರಾಜಭವನಕ್ಕೆ ತೆರಳಿ ರಾಜ್ಯಪಾಲರ ಥಾವರ್ ಚೆಂದ್ ಗೆಹ್ಲೋಟ್ ರನ್ನ ಭೇಟಿಯಾಗಿ 8 ಪುಟಗಳ ದೂರನ್ನ ಸಿಟಿ ರವಿ ನೀಡಿದ್ದಾರೆ.

8 ಪುಟಗಳ ದೂರಿನಲ್ಲಿ ತಮ್ಮ ಮೇಲಿನ ಪೊಲೀಸ್ ದೌರ್ಜನ್ಯ ಬಗ್ಗೆ ದೂರಿನಲ್ಲಿ ವಿವರಣೆ ನೀಡಿದ್ದಾರೆ . ಡಿ.19 ರ ಇಡೀ ರಾತ್ರಿ ಪೊಲೀಸರ ಅಮಾನವೀಯ ವರ್ತನೆ ಬಗ್ಗೆ ಡಿಜಿಪಿಯವರಿಂದ ಸ್ಪಷ್ಟನೆ ಪಡೆದುಕೊಳ್ಳುವಂತೆ ದೂರಿನಲ್ಲಿ ಸಿಟಿ ರವಿ ಮನವಿ ಮಾಡಿದ್ದಾರೆ.

ಡಿಜಿಪಿಯವರಿಗೆ ಕರೆದು ಘಟನೆ ಬಗ್ಗೆ ಸ್ಪಷ್ಟೀಕರಣ ಪಡೆದುಕೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ ಅಲ್ದೇ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಎಸ್‌ಪಿ ಭೀಮಾಶಂಕರ್ ಗುಳೇದ್ ಮತ್ತು ಇತರೆ ಸಂಬಂಧಪಟ್ಟ ಪೊಲೀಸರ ವಿರುದ್ಧ ಕ್ರಮಕ್ಕೆ ಸಿಟಿ ರವಿ ಒತ್ತಾಯಿಸಿದ್ದಾರೆ ಹಾಗೇ ತಮಗೆ ಪ್ರಾಣಾಪಾಯ ಇದ್ದು ಸೂಕ್ತ ಭದ್ರತೆ ಕೊಡಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.

ಇನ್ನೂ ನನ್ನ ಮೇಲೆ ನಡೆದಿರುವ ದೌರ್ಜನ ಪ್ರಕರಣವನ್ನು ರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಇಲಾಖೆಗ ಗಮನಕ್ಕೂ ತರುವಂತೆಯೂ ಪತ್ರದಲ್ಲಿ ರಾಜ್ಯಪಾಲರಿಗೆ ಸಿ.ಟಿ. ರವಿ ಮನವಿ ಮಾಡಿದ್ದಾರೆ. ಇನ್ನೂ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧವೂ ಆರೋಪ ಮಾಡಿದ್ದಾರೆ‌. ಪೊಲೀಸರು ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಸುಪಾರಿ ಕಿಲ್ಲರ್ ಗಳ ತರಹ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನ ಬಂಧನದ ವೇಳೆ ನಿಗೂಢ ಸ್ಥಳಗಳಿಗೆ ಕರೆದೊಯ್ದು ಫೇಕ್ ಎನ್‌ಕೌಂಟರ್ ಮಾಡುವ ಸಂಚು ರೂಪಿಸಿದ್ರು ಎಂದು ದೂರಿನಲ್ಲಿ ಉಲ್ಲೇಖಸಲಾಗಿದೆ. ಪೊಲೀಸರು ಸುವರ್ಣಸೌಧದೊಳಗೆ ಅಕ್ರಮ ಪ್ರವೇಶ ಮಾಡಿ ಬಂಧಿಸಿರೋದು ಅಕ್ರಮ ಇದರಿಂದ ನನ್ನ ಹಕ್ಕು ಚ್ಯುತಿ ಆಗಿದೆ ಎಂದು ಪೊಲೀಸ್ ನಡೆ ಕುರಿತು ದೂರಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಕೊಲೆ ಮಾಡಿವುದಾಗಿ ಧಮಕಿ ಹಾಕಿದ್ದಾರೆ ಎಂಬ ಅಂಶವನ್ನು ಸಹ ಸಿಟಿ ರವಿ ಉಲ್ಲೇಖಿಸಿದ್ದಾರೆ.

ಹಾಗೇ ದೂರಿನಲ್ಲಿ ಫೇಕ್ ಎನ್‌ಕೌಂಟರ್ ವಿಚಾರ ಸಹ ಸಿ.ಟಿ. ರವಿ ಪ್ರಸ್ತಾಪಿಸಿದ್ದಾರೆ.‌ ಒಟ್ಟಾರೆ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಡೆದ ಘಟನೆ ಈಗ ರಾಜ್ಯಪಾಲರ ಅಂಗಳಕ್ಕೆ ಬಂದು ತಲುಪಿದ, ಮುಂದೆ ಏನೆಲ್ಲಾ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡುವುದು ಬೇಕಿದೆ.

Edited By : Abhishek Kamoji
PublicNext

PublicNext

30/12/2024 06:36 pm

Cinque Terre

24.33 K

Cinque Terre

0

ಸಂಬಂಧಿತ ಸುದ್ದಿ