ಬೆಂಗಳೂರು: KSRTC ಸಂಸ್ಥೆಗೆ ಇದೆಂಥಾ ಪರಿಸ್ಥಿತಿ ಬಂತು. ಶಕ್ತಿ ಯೋಜನೆಯಿಂದ ಬರ್ಬಾತ್ ಆಯ್ತಾ ಕೆಎಸ್ಆರ್ಟಿಸಿ? ಈಗಾಗಲೇ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆಯನ್ನು ಕೆಎಸ್ಆರ್ಟಿಸಿ ಸಲ್ಲಿಸಿದ್ದು , ಮತ್ತೊಂದು ಕಡೆ 2 ಸಾವಿರ ಕೋಟಿ ಸಾಲಕ್ಕೆ ಮುಂದಾಗಿದೆ. ಅಷ್ಟೇ ಅಲ್ಲ ಈಗ ಸಂಸ್ಥೆಗೆ ಅಂತ ಬಸ್ ನಿಲ್ದಾಣಕ್ಕೆ ಕಟ್ಟಿದ ಕಟ್ಟಡ ಲೀಸ್ ಕೊಡೋದಕ್ಕೆ ಹರಾಜಿಗೆ ಮುಂದಾಗಿದೆ.
ಬಿಜೆಪಿ ಸರ್ಕಾರ ಇದ್ದಾಗ ಕಟ್ಟಿದ ನಗರದ ಪ್ರಮುಖ ಹಾಗೂ ಬಸವಣ್ಣನವರ ಹೆಸರಲ್ಲಿ ನಿರ್ಮಿಸಿದ ಬಸ್ ನಿಲ್ದಾಣ ಬಸವೇಶ್ವರ ಬಸ್ ನಿಲ್ದಾಣ ಪೀಣ್ಯ ಇದೀಗ ಹರಾಜಿಗೆ ನಿಂತಿದೆ. ನಗರದ ಜಾಲಹಳ್ಳಿ ಸರ್ಕಲ್ ಬಳಿ ನಿರ್ಮಿಸಿದ್ದ ಈ ಬಸ್ ಸ್ಟ್ಯಾಂಡ್ ನ, ಹತ್ತಾರು ಎಕರೆಯಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ನಿರ್ಮಿಸಲಾಗಿದೆ. ಪೀಣ್ಯದಿಂದ ನಗರದ ಹೊರಗೆ ಬರುವ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡಲು ನಿರ್ಮಿಸಲಾಗಿತ್ತು. ಆದರೆ ಇದೀಗ ಖಾಸಗಿ ಅವರಿಗೆ ಬಿಟ್ಟುಕೊಡಲು ಕೆಎಸ್ಆರ್ಟಿಸಿ ಮುಂದಾಗಿದೆ.
ಸಂಸ್ಥೆ ಕಟ್ಟಿದ ಬಸ್ ನಿಲ್ದಾಣವನ್ನೇ ಮದುವೆ ಮಂಟಪ ಮಾಡೋಕೆ ಕೆಎಸ್ಆರ್ಟಿಸಿ ಮುಂದಾಗಿದ್ಯಾ? ಕೆಎಸ್ಆರ್ಟಿಸಿಗೆ ಇದೆಂಥಾ ಪರಿಸ್ಥಿತಿ ಬಂದಿದೆ. ಇದೆಲ್ಲ ನೋಡುತ್ತಿದ್ದರೆ ಶಕ್ತಿ ಯೋಜನೆಗೆ ಹಣ ಸರಿದೂಗಿಸಲು ಬಸ್ ನಿಲ್ದಾಣ ಖಾಸಗಿ ಸಂಸ್ಥೆಗೆ ಕೊಡೋಕೆ ಸರ್ಕಾರ ಮುಂದಾಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ.
PublicNext
02/01/2025 01:20 pm