ಬೆಂಗಳೂರು: ಮದ್ಯದ ಅಮಲಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಪುತ್ರನೊಬ್ಬ ತಹಶೀಲ್ದಾರ್ ವಾಹನ ಅಡ್ಡಗಟ್ಟಿ ಪುಂಡಾಟಿಕೆ ಮೆರೆದಿರುವ ಘಟನೆ ನೆಲಮಂಗಲ ಸಮೀಪದ ಕುಣಿಗಲ್ ರಸ್ತೆ ಲ್ಯಾಂಕೋ ಟೋಲ್ ಬಳಿ ನಡೆದಿದೆ.
ಕುಣಿಗಲ್‌ನ ತಹಶೀಲ್ದಾರ್ ರಶ್ಮಿ ಅವರು ಕುಣಿಗಲ್ ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ರಿಯಲ್ ಎಸ್ಟೇಟ್ ಉದ್ಯಮಿಯ ಪುತ್ರ ರವಿಗೌಡ ಎಂಬಾತ ತಮ್ಮ ಕಾರಿಗೆ ಟಿಂಟೆಡ್ ಗ್ಲಾಸ್ ಬಳಸಿ ಅಡ್ಡಾಡುತ್ತಾ, ಸರ್ಕಾರಿ ಕಾರಿಗೆ ಅಡ್ಡ ಬಂದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ. ಈ ಸಂಬಂಧ ಕುಣಿಗಲ್ ತಹಶೀಲ್ದಾರ್ ರಶ್ಮಿ ಅವರು, 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಆರೋಪಿ ರವಿಗೌಡನನ್ನು ಮತ್ತು ಆತನ ಕಾರನ್ನ ಸೀಜ್ ಮಾಡಿದ್ದಾರೆ.
ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಮದ್ಯ ಸೇವನೆ ಮತ್ತು ಅತೀ ವೇಗ ಕಾರು ಚಲಾವಣೆ ಸೇರಿ ಹಲವು ಪ್ರಕರಣ ದಾಖಲಾಗಿದೆ.
PublicNext
02/01/2025 12:57 pm