ಬೆಂಗಳೂರು : ಹೊಸ ವರ್ಷಕ್ಕೆ ಇನ್ನೊಂದೇ ದಿನ ಬಾಕಿ ಇದೆ.. ಬಿಬಿಎಂಪಿ ಕೂಡ ನ್ಯೂ ಇಯರ್‌ಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.. ಪಾಲಿಕೆ ಮಾಡಿ ಕೊಂಡಿರುವ ತಯಾರಿ ಬಗ್ಗೆ ಕಮಿಷನರ್ ಮಾತನಾಡಿದ್ದು, ಎಲ್ಲೆಂದರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡುವ ಹಾಗಿಲ್ಲ, ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆಗೆ ಪರ್ಮಿಷನ್ ಅಗತ್ಯ ಎಂದಿದ್ದಾರೆ.
ಪ್ರತಿವರ್ಷ ಬೆಂಗಳೂರಲ್ಲಿ ಹೊಸವರ್ಷ ಆಚರಣೆಗೆ 31ಕ್ಕೆ ಜನ ಸೇರ್ತಾರೆ . ಇದಕ್ಕೆ ವಿಸ್ತೃತವಾಗಿ ಪೊಲೀಸ್ ಆಯುಕ್ತರು ಗೈಡ್ ಲೈನ್ಸ್ ನಿರ್ಭಂಧ ಹೇರಿರುತ್ತಾರೆ. ಲೈಟ್ ವ್ಯವಸ್ಥೆ, ಕಸ ಇತ್ಯಾದಿ ಡಿಸ್ಪೋಸ್, ಫಸ್ಟ್ ಏಡ್ ಕೊಡುವ ವಿಚಾರ ನಮಗೆ ಬರುತ್ತೆ . ಈ ಮೂರು ವಿಚಾರ ಪಾಲಿಕೆ ವ್ಯಾಪ್ತಿಗೆ ಬರುತ್ತೆ . ನಾವು ಲಾಸ್ಟ್ ಟೈಮ್ ಕೂಡ ಪ್ರಥಮ ಚಿಕಿತ್ಸೆ ಕೊಡಲು ಕ್ಯಾಂಪ್ ಕೂಡ ಮಾಡಿದ್ದೇವೆ . ಎಂಜಿ ರೋಡ್ , ಬ್ರಿಗೇಡ್ ರೋಡ್ ಬಿಟ್ಟು ಉಳಿದ ಕಡೆ ಹೊಸ ವರ್ಷ ಆಚರಣೆಗೆ ಪರ್ಮಿಷನ್ ಪಡೆಯಬೇಕು. ನಮ್ಮ ಪೂರ್ತಿ ಬೆಂಬಲ ಪೊಲೀಸ್ ಇಲಾಖೆಗೆ ಕೊಡ್ತೇವೆ ಎಂದಿದ್ದಾರೆ..
PublicNext
30/12/2024 04:35 pm