ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ: ಕಟ್ಟೆಮಾಡು ಮಹಾಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆ ನೋವನ್ನುಂಟು ಮಾಡಿದೆ - ಶಾಸಕ ಎ.ಎಸ್.ಪೊನ್ನಣ್ಣ

ಮಡಿಕೇರಿ: ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆ ನೋವನ್ನುಂಟು ಮಾಡಿದೆ. ಇಂತಹದಕ್ಕೆ ಅವಕಾಶ ಮಾಡುವುದು ಬೇಡ, ನಾವೆಲ್ಲರೂ ಒಂದೇ, ಎಲ್ಲರೂ ದೇವರಲ್ಲಿ ವಿಶ್ವಾಸ, ನಂಬಿಕೆ ಇರುವವರು. ಪ್ರಾರ್ಥನೆ ಮಾಡಲು ಹೋದಾಗ ಭಕ್ತಿ ಪೂರ್ವಕವಾಗಿ ಹೋಗಿರುತ್ತೇವೆ. ಅಂತಹ ಸಂದರ್ಭ ಸಂಘರ್ಷಕ್ಕೆ ಅವಕಾಶ ಮಾಡುವುದು ಸರಿಯಲ್ಲ. ಎಲ್ಲರೂ ಶಾಂತಿಯನ್ನು ಕಾಪಾಡೋಣ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಮನವಿ ಮಾಡಿದ್ದಾರೆ.

ಭಕ್ತಾಧಿಗಳು ದೇವಾಲಯಕ್ಕೆ ಹೋದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅಪಚಾರವಾಗುವ ಉಡುಪನ್ನು ಧರಿಸಬಾರದು, ಇದನ್ನು ಧಾರ್ಮಿಕವಾಗಿ ಒಪ್ಪಲು ಸಾಧ್ಯವಿಲ್ಲ. ಆದರೆ ಐತಿಹಾಸಿಕವಾಗಿ ಕೊಡವ ಜನಾಂಗದವರು, ಕೊಡವ ಭಾಷೆಯನ್ನು ಮಾತನಾಡುವ ಜನಾಂಗದವರು, ಕೊಡವ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿರುವ ವಿವಿಧ ಜನಾಂಗದವರು ಸಾಂಪ್ರದಾಯಿಕವಾಗಿ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ ಭಕ್ತಿಯನ್ನು ಅರ್ಪಣೆ ಮಾಡುವುದು, ಪ್ರಾರ್ಥನೆ ಸಲ್ಲಿಸುವುದು ಹೊಸದಲ್ಲ. ಇದು ಐತಿಹಾಸಿಕವಾಗಿ ನಡೆದುಕೊಂಡು ಬಂದ ಸಂಪ್ರದಾಯ ಮತ್ತು ಪಾಲನೆಯಾಗಿದೆ.

ಕಟ್ಟೆಮಾಡು ದೇವಾಲಯದಲ್ಲಿ ಬೈಲಾಗಳನ್ನು ಅಳವಡಿಸಿ ಅದನ್ನು ತಡೆದಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದ್ದು, ಅಂತಹ ಬೈಲಾಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡಿ ಅವಕಾಶ ಮಾಡಿಕೊಡುವಂತೆ ದೇವಾಲಯ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.

ಜಾತಿ ಸಂಘರ್ಷ ಅಥವಾ ಧರ್ಮ ಸಂಘರ್ಷಕ್ಕೆ ಇಂತಹ ಘಟನೆ ಅವಕಾಶ ಮಾಡಿಕೊಡಬಾರದು, ಸಮಾಜದಲ್ಲಿ ಶಾಂತಿಯನ್ನು ಕಾಪಾಡಬೇಕು ಎನ್ನುವುದು ಎಲ್ಲರ ಉದ್ದೇಶ. ವಿವಿಧ ಜನಾಂಗಗಳ, ಜಾತಿ, ಧರ್ಮಗಳ ಎಲ್ಲಾ ಆಚರಣೆ, ಸಂಪ್ರದಾಯ ಮತ್ತು ಉಡುಪುಗಳನ್ನು ಗೌರವಿಸುವುದೇ ನಿಜವಾದ ಕೊಡಗು ನಾಡಾಗಿದೆ. ಅಂತಹ ನಾಡನ್ನು ಕಟ್ಟಲು ಎಲ್ಲರೂ ಕೈಜೋಡಿಸೋಣ ಎಂದು ಪೊನ್ನಣ್ಣ ಕೋರಿದ್ದಾರೆ.

Edited By : PublicNext Desk
Kshetra Samachara

Kshetra Samachara

29/12/2024 04:48 pm

Cinque Terre

280

Cinque Terre

0

ಸಂಬಂಧಿತ ಸುದ್ದಿ