ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ದತ್ತಪೀಠದಲ್ಲಿ ಮತ್ತೆ ಕೋಲ್ಡ್ ವಾರ್

ಚಿಕ್ಕಮಗಳೂರು: ಹಿಂದೂ-ಮುಸ್ಲಿಮರ ವಿವಾದಿತ ದತ್ತಪೀಠದಲ್ಲಿನ ಇತ್ತೀಚಿನ ಆಚರಣೆಗಳಿಂದ ಹಿಂದೂ-ಮುಸ್ಲಿಮರ ಮಧ್ಯೆ ಮತ್ತೆ ಕೋಲ್ಡ್ ವಾರ್ ಏರ್ಪಟ್ಟಿದೆ. ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿ ಹಿಂದೂಗಳಿಗೆ ಒಂದು ರೀತಿ ಮುಸ್ಲಿಮರಿಗೆ ಒಂದು ರೀತಿ ನಡೆದುಕೊಳ್ತಿದ್ದಾರೆ. ಅವರನ್ನ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮುಸ್ಲಿಮರು ಹಿಂದೂಗಳ ಆಗ್ರಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರಣ ಇಷ್ಟೆ ದತ್ತಪೀಠದಲ್ಲಿ ಮುಸ್ಲಿಮರು ಗ್ಯಾರವಿ ಆಚರಣೆ ಮಾಡಿದ್ದಾರೆ. ಇದು ಕಾನೂನಿಗೆ ವಿರೋಧ. ಅವರಿಗೆ ದತ್ತಪೀಠದಲ್ಲಿ ಹೊಸ ಆಚರಣೆ ಗ್ಯಾರವಿ ಆಚರಿಸೋದಕ್ಕೆ ಹೇಗೆ ಅವಕಾಶ ನೀಡಿದ್ರು ಅಂತ ಹಿಂದೂಗಳು ಡಿ.ಸಿ ವಿರುದ್ಧ ಕಿಡಿ ಕಾರಿದ್ದಾರೆ. ಆದ್ರೆ, ಮುಸ್ಲಿಮರು ವಿಶ್ವ ಹಿಂದೂ ಪರಿಷದ್ ಮುಖಂಡರಿಗೆ ಅರಿವಿಲ್ಲ. ಸರಿಯಾದ ಮಾಹಿತಿ ಇಲ್ಲ. ಗ್ಯಾರವಿ ಹಬ್ಬ ಪ್ರತಿ ವರ್ಷ ನಡೆದುಕೊಂಡು ಬರ್ತಿದೆ ಎಂದು ಡಿ.ಸಿ ಪರ ಬ್ಯಾಟ್ ಬೀಸಿದ್ದಾರೆ.

ಆದರೆ, ಹಿಂದೂ ಸಂಘಟನೆಯವ್ರು ಜಿಲ್ಲಾಧಿಕಾರಿ ಹಿಂದೂಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ದತ್ತಜಯಂತಿ ಸಂದರ್ಭ ದತ್ತಪೀಠದಲ್ಲಿ ಯಾವುದೇ ಸೌಲಭ್ಯ ಕಲ್ಪಿಸಿರಲಿಲ್ಲ. ಔದುಂಬರ ಮರಕ್ಕೆ ಬೇಲಿ ಹಾಕಿಸಿ ಪೂಜೆಗೆ ಅನುಮತಿ ನೀಡಿರಲಿಲ್ಲ. ಮುಸ್ಲಿಮರಿಗೆ ಹೊಸ ಆಚರಣೆ ಮೂಲಕ ಗುಹೆಯೊಳಗೆ ಹೋಗಲು ಅನುಮತಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನ ಹೊರಹಾಕಿ, ನಮ್ಮ ಮನವಿಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಮುಸ್ಲಿಮರಿಗೆ ಹೊರ ಆಚರಣೆಗೆ ಅವಕಾಶ ನೀಡಿದ್ದಾರೆ ಎಂದು ರಾಜ್ಯಪಾಲರು ಸೇರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಿರಣ್ ರಿಜುವರೆಗೂ, ಅಲ್ಲಿ ಮಾಂಸಹಾರ ಮಾಡಿ ದತ್ತಾತ್ರೇಯರ ಕ್ಷೇತ್ರವನ್ನ ಅಪವಿತ್ರಗೊಳಿಸಿದ್ದಾರೆಂದು ದೂರು ನೀಡಿದ್ದಾರೆ. .

ಒಟ್ಟಾರೆ, ಇನಾಂ ದತ್ತಾತ್ರೇಯ ಪೀಠದಲ್ಲಿನ ಗ್ಯಾರವಿ ಹಬ್ಬ ಮತ್ತೊಂದು ವಿವಾದದ ಕಿಡಿ ಹತ್ತಿಸಿದೆ. ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವಾಗಲೇ ಈ ವಿವಾದ ರಾಜ್ಯಪಾಲರು ಹಾಗೂ ಕೇಂದ್ರ ಗೃಹ ಇಲಾಖೆಯ ಅಂಗಳಕ್ಕೂ ಮುಟ್ಟಿದೆ. ಈ ವಿವಾದದ ಕಿಡಿ ತಣ್ಣಾಗಾಗುತ್ತೋ ಅಥವಾ ದೊಡ್ಡ ಕಿಡಿಯಾಗುತ್ತೊ ಕಾದು ನೋಡಬೇಕಾಗಿದೆ.

ಡ್ಯಾನಿ, ಪಬ್ಲಿಕ್ ನೆಕ್ಸ್ಟ್ ಚಿಕ್ಕಮಗಳೂರು

Edited By : Ashok M
PublicNext

PublicNext

29/12/2024 02:36 pm

Cinque Terre

42.72 K

Cinque Terre

0

ಸಂಬಂಧಿತ ಸುದ್ದಿ