ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳಿಂದ ಪ್ರಯಾಣಿಸಲಾಗದೆ ಸವಾರರು ಹೈರಾಣಾಗಿ ಹೋಗಿದ್ದಾರೆ. ಕಳಸದಿಂದ ಕುದುರೆಮುಖ ಹಾಗೂ ಹೊರನಾಡಿನಿಂದ ಕಳಸಕ್ಕೆ ತೆರಳುವ ಮಾರ್ಗಗಳು ನಿತ್ಯವೂ ವಾಹನಗಳಲ್ಲಿ ಓಡಾಡೋರಿಗೆ ನರಕ ದರ್ಶನ ನೀಡುತ್ತಿವೆ. ಅಪರೂಪಕ್ಕೆ ಬರುವ ಪ್ರವಾಸಿಗರು ರಸ್ತೆಯ ದುಸ್ಥಿತಿ ಕಂಡು ಹಿಡಿಶಾಪ ಹಾಕ್ತಾ ಹೋಗುತ್ತಾರೆ. ಪ್ರತಿನಿತ್ಯ ತುರ್ತು ಕೆಲಸಕ್ಕೆ ಓಡಾಡೋರ ಸ್ಥಿತಿಯಂತೂ ಗುಂಡಿ ತಪ್ಪಿಸೋದ್ರಲ್ಲಿಯೇ ಹೈರಾಣಾಗಿ ಹೋಗುವಂತಾಗಿದೆ.
ಇನ್ನೂ ಈ ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರು ಕೊಂಚ ಯಾಮಾರಿದ್ರೂ ಬೈಕ್ ಸ್ಕಿಡ್ ಆಗಿ ಬೀಳೋದು ಫಿಕ್ಸ್. ಈ ರಸ್ತೆಯಲ್ಲಿ ದಿನಕ್ಕೆ ಇಬ್ಬರಾದರೂ ಬಿಳದೇ ಇರೋಲ್ವಂತೆ. ರಸ್ತೆ ಸರಿಪಡಿಸಿ ಅಂತಾ ಹೋರಾಟವಾಯ್ತು. ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡು ಆಯ್ತು. ಆದರೂ ಏನು ಪ್ರಯೋಜನ ಆಗ್ತಾ ಇಲ್ಲ ಅಂತಾ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೋ ಈಗ ಸ್ಥಳೀಯರು ಮತ್ತೊಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅದು ಏನಂದ್ರೆ ರಸ್ತೆ ಸರಿಪಡಿಸಿ ಇಲ್ಲಾಂದ್ರೆ ನಾವೇ ಹಣ ಹಾಕಿ ಗುಂಡಿ ಮುಚ್ತೇವೆ ಅನ್ನೋ ಸಂದೇಶವನ್ನ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ರವಾನಿಸಿದ್ದಾರೆ.
ಒಟ್ಟಾರೆ ರಸ್ತೆ ಸರಿಪಡಿಸಿ ಎಂದು ಎಷ್ಟೇ ಮನವಿ ಮಾಡಿದ್ರು ಪ್ರಯೋಜನವಂತೂ ಆಗ್ತಿಲ್ಲ. ಈಗ ನಾವೇ ಹಣ ಕಲೆಕ್ಟ್ ಮಾಡಿ ಮಾಡಿಸ್ತೇವೆ ಅಂತಾ ಜನರು ಟಕ್ಕರ್ ನೀಡಿದ್ದಾರೆ. ಈಗಲಾದ್ರೂ ಸರಿಮಾಡೋಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗ್ತಾರಾ ಅಂತಾ ಕಾದು ನೋಡಬೇಕಾಗಿದೆ.
ಡ್ಯಾನಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು
PublicNext
29/12/2024 10:02 am