ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮನೆಯಂಗಳಕ್ಕೆ ಬಂದ ದೈತ್ಯ ಕಾಳಿಂಗ ಸರ್ಪ…!

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಳಿಂಗ ಸರ್ಪಗಳ ಕಾಟ ದಿನೇ ದಿನೇ ಹೆಚ್ಚುತ್ತಿದೆ. ಕಾಫಿ, ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗ ಸರ್ಪಗಳು ಇದೀಗ ಮನೆಯಂಗಳಕ್ಕೆ ಬರಲು ಆರಂಭಿಸಿವೆ.

ತಾಲೂಕಿನ ಕಲ್ಮಕ್ಕಿ ಗ್ರಾಮದ ಶಿವಣ್ಣ ಎಂಬುವವರ ಮನೆಯ ಮುಂದೆ 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ಇದರಿಂದ ಮನೆಮಂದಿ ಆತಂಕಕ್ಕೆ ಈಡಾಗಿದ್ದರು. ವಿಷಯ ತಿಳಿದ ಉರಗ ತಜ್ಞ ಸ್ನೇಕ್ ರಿಜ್ವಾನ್ ಹಾವನ್ನ ರಕ್ಷಿಸಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕುದುರೆಮುಖ ಕಾಡಿಗೆ ಬಿಟ್ಟಿದ್ದಾರೆ.

Edited By : Manjunath H D
PublicNext

PublicNext

01/01/2025 07:46 am

Cinque Terre

50.69 K

Cinque Terre

0

ಸಂಬಂಧಿತ ಸುದ್ದಿ