ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಅಪರೂಪದ 5 ಅಡಿ ಉದ್ದದ ಸ್ಪೆಕ್ಟಾಕಲ್ಡ್ ಕೋಬ್ರಾ ರಕ್ಷಣೆ

ಚಿಕ್ಕಮಗಳೂರು: ಜಿಲ್ಲೆಯ ಕಳಸ ಭಾಗದಲ್ಲಿ ಕಾಳಿಂಗ ಸರ್ಪ, ಹೆಬ್ಬಾವುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಆದರೆ ಇಂದು ತಾಲೂಕಿನ ಹೆಡದಾಳು ಗ್ರಾಮದ ವಿದ್ಯಾಸಾಗರ್ ಎಂಬುವವರ ಮನೆಯ ಅಡಿಕೆ ದಬ್ಬೆಯಲ್ಲಿ ಅವಿತ್ತಿದ್ದ 5 ಅಡಿ ಉದ್ದದ ಕಾಮನ್ ಇಂಡಿಯನ್ ಕೋಬ್ರಾ ಅಥವಾ ಸ್ಪೆಕ್ಟಾಕಲ್ಡ್ ಕೋಬ್ರಾ ಎಂದು ಕರೆಯಲ್ಪಡುವ ಅಪರೂಪದ ಸರ್ಪವನ್ನು ಉರಗ ತಜ್ಞ ರಿಜ್ವಾನ್ ರಕ್ಷಿಸಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕುದುರೆಮುಖ ಉದ್ಯಾನವನಕ್ಕೆ ಬಿಟ್ಟಿದ್ದಾರೆ.

ಹೆಚ್ಚು ವಿಷಕಾರಿಯಾಗಿರುವ ಈ ಪ್ರಭೇದದ ಸರ್ಪಗಳು ಈ ಹಿಂದೆ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಣ ಸಿಗುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅತಿ ವಿರಳವಾಗಿದ್ದು ಅಳಿವಿನ ಅಂಚಿಗೆ ತಲುಪಿವೆ.

Edited By : Vinayak Patil
PublicNext

PublicNext

27/12/2024 04:37 pm

Cinque Terre

26.07 K

Cinque Terre

0

ಸಂಬಂಧಿತ ಸುದ್ದಿ