ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕೆರೆ ಹಾವನ್ನು ನುಂಗಿ ನರಳಾಡಿದ ಕಾಳಿಂಗ ಸರ್ಪ

ಚಿಕ್ಕಮಗಳೂರು: ಕೆರೆ ಹಾವನ್ನ ನುಂಗಿ ಓಡಾಡಲು ಆಗದೇ ನರಳಾಡುತ್ತಿದ್ದ ಸುಮಾರು 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮಾವಿನಕೆರೆ ಗ್ರಾಮದ ಪ್ರಕಾಶ್ ಎಂಬುವರ ತೋಟದಲ್ಲಿ ನಡೆದಿದೆ.

ಬಾಳೆಖಾನ್ ಕಚ್ಚನಹಕ್ಲು ಪ್ರಕಾಶ್ ತೋಟದಲ್ಲಿ ಕೆರೆ ಹಾವನ್ನ ನುಂಗಿ ನರಳಾಡುತ್ತಿತ್ತು. ಕೆರೆ ಹಾವನ್ನ ನುಂಗಿ ಓಡಾಡಲು ಆಗದೇ ನರಳಾಡುತ್ತಾ ಜೋರಾಗಿ ಉಸಿರು ಬಿಡುತ್ತಿದ್ದನ್ನ ಗಮನಿಸಿದ ತೋಟದ ಕೆಲಸಗಾರರು ಕಾಳಿಂಗ ಸರ್ಪನನ್ನ ನೋಡಿ ಭಯಗೊಂಡು ಓಡಿಹೋಗಿದ್ದಾರೆ. ಕೆರೆ ಹಾವನ್ನ ನುಂಗಿದ್ದ ಕಾಳಿಂಗ ಸರ್ಪದ ದೇಹ ನೋಡಿ ಕೆಲಸಗಾರರು ಅತಂಕಗೊಂಡಿದ್ದರು.‌ ತೋಟದ ಮಾಲೀಕ ಸ್ಥಳಕ್ಕೆ ಬಂದು ನೋಡಿ ಉರಗತಜ್ಞ ರಿಜ್ವಾನ್ ಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ರಿಜ್ವಾನ್ ಸುಮಾರು ಅರ್ಧ ಗಂಟೆಗಳ ಕಾಲ ತೋಟದೊಳಗೆ ಹುಡುಕಾಡಿ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿದ್ದಾರೆ. ಕಾಳಿಂಗ ಸರ್ಪವನ್ನ ಸೆರೆ ಹಿಡಿಯುವ ವೇಳೆ ಕೆರೆ ಹಾವನ್ನ ಸಂಪೂರ್ಣ ನುಂಗಿದ್ದ ಸರ್ಪ ಕೆರೆ ಹಾವನ್ನ ಹೊರಹಾಕಲು ಯತ್ನಿಸಿದೆ. ಆದರೆ, ಉರಗತಜ್ಞ ರಿಜ್ವಾನ್ ಹಾವನ್ನ ಹೊರಹಾಕಿಸದೆ ಕಾಳಿಂಗ ಸರ್ಪವನ್ನ ಸೆರೆಹಿಡಿದು ಕಳಸ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದಾರೆ. ಕಾಳಿಂಗ ಸರ್ಪವನ್ನ ಸೆರೆ ಹಿಡಿದ ಬಳಿಕ ಕಾಳಿಂಗನನ್ನ ನೋಡಿದ ಕೆಲಸಗಾರರು ನಿಟ್ಟುಸಿರು ಬಿಟ್ಟಿದ್ದಾರೆ.

Edited By : Shivu K
PublicNext

PublicNext

15/12/2024 04:14 pm

Cinque Terre

35.05 K

Cinque Terre

0