ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ಮಾನವ ಸಂಘರ್ಷ ಆನೆ ದಾಳಿಗೆ ವ್ಯಕ್ತಿ ಸಾವು

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ಮುಂದುವರೆದಿದೆ ಕಳೆದ 20 ದಿನಗಳ ಹಿಂದಷ್ಟೇ ಎನ್.ಆರ್ ಪುರ ತಾಲೂಕಿನ ಸೀತೂರಿನಲ್ಲಿ ಆನೆಯೊಂದು ಉಮೇಶ್ ಎಂಬುವರನ್ನು ಬಲಿ ಪಡೆದಿತ್ತು. ಇಂದು ಮತ್ತೆ ಎನ್.ಪುರ ತಾಲೂಕಿನ ಮಡುಬೂರು ಸಮೀಪದ ಯಕ್ಕಡಬೈಲು ಗ್ರಾಮದ ಏಲಿಯಾಸ್ (75) ಎಂಬುವರನ್ನು ಆನೆ ಬಲಿ ಪಡೆದಿದೆ.

ಕಳೆದ ಭಾನುವಾರವಷ್ಟೇ 20 ದಿನಗಳ ಹಿಂದೆ ಆನೆ ದಾಳಿಯಿಂದ ಸಾವನ್ನಪ್ಪಿದ್ದ ಉಮೇಶ್ ಕುಟುಂಬಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಸಾಂತ್ವಾನ ಹೇಳಿದ್ದರು. ಈ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿರುವುದು ತಾಲೂಕಿನ ಜನರಲ್ಲಿ ಆತಂಕದ ಸೃಷ್ಟಿಯಾಗಿದೆ. ಇಂದು ಬೆಳಿಗ್ಗೆ ಜಾನುವಾರುಗಳನ್ನು ಹುಡುಕಿಕೊಂಡು ಹೋಗಿದ್ದ ವೇಳೆ ಏಕಾಏಕಿ ಎರಗಿರುವ ಕಾಡಾನೆಯು ಏಲಿಯಾಸ್ ಅವರನ್ನು ತುಳಿದು ಸಾಯಿಸಿದೆ. ಎಲಿಯಾಸ್ ಅವರ ಜೊತೆಗೆ ಅವರ ಮಗ ವರ್ಗಿಸ್ ತೆರಳಿದ್ದರು.

ಈ ವೇಳೆ ವರ್ಗಿಸ್ ಅದೃಷ್ಟವಶಾತ್ ಪಾರಾಗಿ ಬಂದಿದ್ದಾರೆ. ಆನೆಯೂ ಏಲಿಯಾಸ್ ಅವರ ಮೇಲೆ ದಾಳಿ ನಡೆಸಿ ಬಲಿ ಪಡೆದ ನಂತರವೂ ಮೃತ ದೇಹದ ಸುತ್ತ ಗೀಳಿಡುತ್ತಾ ಓಡಾದಿದೆ.

Edited By : Nirmala Aralikatti
PublicNext

PublicNext

19/12/2024 02:38 pm

Cinque Terre

12.95 K

Cinque Terre

0