ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕುಟುಂಬದಲ್ಲಿ ಕಿರುಕುಳ ಆರೋಪ - ನೇಣಿಗೆ ಶರಣಾದ ಮಹಿಳೆ

ಬೆಳಗಾವಿ: ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.

ಸಾಂಬ್ರಾ ಗ್ರಾಮದ ಸವಿತಾ ಮಾರುತಿ ಜೋಗಾನಿ (32) ನೇಣಿಗೆ ಶರಣಾದ ಮಹಿಳೆ. ಮೂಲತಃ ರಾಕಸಕೊಪ್ಪ ಗ್ರಾಮದ ಪತಿ ಮಾರುತಿ ಜೋಗಾನಿ (40) ಹಾಗೂ ಕುಟುಂಬಸ್ಥರ ವಿರುದ್ಧ ತಮ್ಮ ಮಗಳ ಸಾವಿಗೆ ಸುನಿತಾ ಗಂಡನ ಮನೆಯವರೇ ಕಾರಣ ಎಂದಿದ್ದಾರೆ.

ನಾಲ್ಕು ವರ್ಷ ವಯಸ್ಸಿನ ಗಂಡು ಮಗು ಹೊಂದಿರುವ ಮಾರುತಿ-ಸವಿತಾ ದಂಪತಿ 2018ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿಯೇ ಮದುವೆ ಕೂಡಾ ಆಗುತ್ತಿದ್ದರು. ಇನ್ನೂ ಸುನಿತಾ ಪತಿ ಮಾರುತಿ ಸರ್ಕಾರಿ ಶಾಲೆ ಶಿಕ್ಷಕನಾಗಿದ್ದಾನೆ.‌ ಮದುವೆ ನಂತರ ಪತಿ ಮಾರುತಿ, ಕುಟುಂಬಸ್ಥರು ಸುನಿತಾಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಕ್ಷುಲಕ ಕಾರಣಕ್ಕೆ ಪತಿ ಮಾರುತಿಯಿಂದ‌ ಸವಿತಾ ಮೇಲೆ ಹಲ್ಲೆ ಮಾಡಿದ್ದಾನೆ.‌ ನಿರಂತರ ಕಿರುಕುಳ ಹಿನ್ನೆಲೆ ‌ಮನೆಯಲ್ಲಿ ಯಾರೂ ಇಲ್ಲದಾಗ ಸುನಿತಾ ನೇಣಿಗೆ ಶರಣಾಗಿದ್ದಾಳೆ.‌ ಮಗಳು ನೇಣು ಹಾಕಿಕೊಂಡಿಲ್ಲ ಗಂಡನೇ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ‌ಂದು‌ ಮೃತ ಮಹಿಳೆಯ ಸಹೋದರಿ ಆರೋಪಿಸಿದ್ದು, ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಸಂಬಂಧ ದೂರು ದಾಖಲಾಗಿದೆ.

Edited By : Shivu K
PublicNext

PublicNext

29/12/2024 01:43 pm

Cinque Terre

44.05 K

Cinque Terre

0

ಸಂಬಂಧಿತ ಸುದ್ದಿ