ಮಡಿಕೇರಿ: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ಕೊಡಗು ಜಿಲ್ಲೆ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ಪಣಿ ಯರವರ ತಮ್ಮು ಎಂಬವರ ಹಿರಿಯ ಪುತ್ರ ಚೆಂಬೆಬೆಳ್ಳೂರು ಗ್ರಾಮದ ತೋಟದ ಲೈನ್‌ಮನೆಯಲ್ಲಿ ನೆಲೆಸಿದ್ದ ಪೊನ್ನು (21) ಮೃತ ದುರ್ದೈವಿ.
ಚೆಂಬೆಬೆಳ್ಳೂರು ಗ್ರಾಮದ ಪಿ. ಬನ್ನಿ ಎಂಬವರ ತೋಟದಲ್ಲಿ ಕೆಲಸ ಮಾಡುತ್ತ ಲೈನ್‌ಮನೆಯಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ಪೊನ್ನು ಎಂದಿನಂತೆ ಕಾಫಿ ತೋಟದಲ್ಲಿದ್ದು, ಕೆಲಸ ಮುಗಿಸಿದ ಬಳಿಕ ತೋಟದೊಳಗೆ ಹಲಸಿನಕಾಯಿ ಮರಕ್ಕೆ ಹತ್ತಿದ ವೇಳೆಯಲ್ಲಿ ಗುಂಡು ತಗುಲಿದೆ. ಪರಿಣಾಮ ಸ್ಥಳದಲ್ಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
28/12/2024 11:30 am