ಮಡಿಕೇರಿ: ಜಮ್ಮು ಕಾಶ್ಮೀರ ಪೂಂಚ್‌ನಲ್ಲಿ ನಡೆದ ದುರಂತದಲ್ಲಿ ಕರ್ನಾಟದ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ.ಮತ್ತೋರ್ವ ಕೊಡಗಿನ ಯೋಧ ದಿವಿನ್ 28 ಅವರ ಸ್ಥಿತಿ ಚಿಂತಾಜನಕವಾಗಿದೆ.
ಜಮ್ಮು ಕಾಶ್ಮೀರದಲ್ಲಿ ಮೊನ್ನೆ ಸಂಭವಿಸಿದ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಕೊಡಗಿನ ಯೋಧ ಗಂಭೀರ ಗಾಯಗೊಂಡಿದ್ದಾರೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮದ 28 ವರ್ಷ ಪ್ರಾಯದ ದಿವಿನ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯೋಧನಾಗಿದ್ದಾನೆ. ಯೋಧನ ಸ್ಥಿತಿ ಚಿಂತಾಜನಕವಾಗಿದು. ಶ್ರೀ ನಗರ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಬಗ್ಗೆ ಸೇನೆಯಿಂದ ಕುಟುಂಬಸ್ಥರಿಗೆ ಮಾಹಿತಿ ಬಂದಿದೆ.
ಸೇನೆಯಿಂದ ದಿವಿನ್ ತಾಯಿ ಅವರಿಗೆ ಕರೆ ಬಂದಿದು ಇದೀಗ ಜಯ ಅವರು ನಿನ್ನೆ ಸಂಜೆಯೇ ಕೊಡಗಿನಿಂದ ಶ್ರೀ ನಗರಕ್ಕೆ ತೆರಳಿದ್ದಾರೆ. ಅಲ್ಲಿಗೆ ತೆರಳಿದ ಬಳಿಕವಷ್ಟೇ ದಿವಿಲ್ ಆರೋಗ್ಯದ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ ದಿವಿಲ್ ತನ್ನ ತಂದೆ ತಾಯಿಗೆ ಏಕೈಕ ಪುತ್ರನಾಗಿದ್ದು ಹತ್ತು ವರ್ಷದ ಹಿಂದೆ ಸೈನಿಕ ಸೇರಿದ ಇತ್ತೀಚೆಗೆ ನಿಶ್ಚಿತಾರ್ಥ ಕೂಡ ನೆರವೇರಿತು ಇದೆ ಫೆಬ್ರವರಿಯಲ್ಲಿ ವಿವಾಹ ನಿಶ್ಚಯವಾಗಿತ್ತು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಇದೀಗಾ ಕುಟುಂಬಸ್ಥರು ಗ್ರಾಮಸ್ಥರು ದಿವಿನ್ ಅದಷ್ಟು ಬೇಗಾ ಹುಶಾರಾಗಿ ಬರುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ.
PublicNext
27/12/2024 09:47 pm