ಬೆಂಗಳೂರು: ಐಶ್ವರ್ಯಗೌಡ ವಿರುದ್ದ ವನಿತಾ ಐತಾಳ್ ನೀಡಿದ್ದ ವಂಚನೆ ದೂರು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದೂರುದಾರೆ ವನಿತಾ ಐತಾಳ್ ವಿರುದ್ಧವೇ ಐಶ್ವರ್ಯ ತಿರುಗಿ ಬಿದ್ದಿದ್ದಾಳೆ. ವನಿತಾ ಕುರಿತು ಐಶ್ವರ್ಯಗೌಡ ಮಾತಾಡಿರುವ ವಿಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ. ವನಿತಾ ಐತಾಳ್ ಬಗ್ಗೆ ಐಶ್ವರ್ಯಗೌಡ ಹೇಳಿದ್ದೇನು ಅಂತ ನೋಡೋದಾದ್ರೆ.
ದೂರು ದಾಖಲಾಗೋ ಮುನ್ನ ಇಬ್ಬರೂ ಗೆಳತಿಯರೇ.. ಇಬ್ಬರೂ ಆತ್ಮೀಯರೇ.. ವಿನಯ್ ಕುಲಕರ್ಣಿಗೆ ಗದೆ, ಬೆಳ್ಳಿ ಕಿರೀಟ, ಖಡ್ಗ ನೀಡಿದ್ಯಾರು? ಅನ್ನೋದನ್ನ ಐಶ್ವರ್ಯ ಸಾಕ್ಷಿ ಸಮೇತ ಬಿಚ್ಚಿಟ್ಟಿದ್ದಾರೆ. ವಾರಾಹಿ ಜುವೆಲ್ಲರ್ಸ್ ಅಂಗಡಿಯಿಂದಲೇ ತರಲಾಗಿದೆ. ಬೆಳ್ಳಿ ಸಾಮಾಗ್ರಿಯನ್ನ ವಿನಯ್ ಕುಲಕರ್ಣಿಗೆ ನೀಡಲಾಗಿದೆ.
ಶಾಸಕ ವಿನಯ್ ಕುಲಕರ್ಣಿಗೆ ಸನ್ಮಾನ ಮಾಡಲು ಐಶ್ವರ್ಯಳನ್ನ ಕರೆದೊಯ್ದಿದ್ದೇ ವನಿತಾ ಐತಾಳ್ ಅಂತೆ. ಐಶ್ವರ್ಯಗೌಡ ಗದೆ ನೀಡಿದ್ರೆ, ಬೆಳ್ಳಿ ಕಿರೀಟ ತೊಡಿಸಿದ್ದು ವನಿತಾ ಹಾಗೂ ಆಕೆಯ ಸ್ನೇಹಿತ ಅಭಿನವ್, ತಾನಿದ್ದೂ ಇಲ್ಲದಂತೆ ನಟಿಸಿದ್ದ ವನಿತಾ ಕತೆಯನ್ನು ಐಶ್ವರ್ಯಗೌಡ ಬಿಚ್ಚಿಟ್ಟಿದ್ದಾರೆ.
ವಿನಯ್ ಕುಲಕರ್ಣಿ ಅವರ ಫಾರ್ಮ್‌ಹೌಸ್ ನಲ್ಲಿ ಅದೇ ಜಾಗ, ಅದೇ ಕುದುರೆ ಬಳಿ ಐಶ್ವರ್ಯ ಫೋಟೋ ಮಾತ್ರ ರಿವಿಲ್ ಆಗಿತ್ತು. ಸದ್ಯ ವನಿತಾ ಐತಾಳ ಫೋಟೋ ಕೂಡ ರಿವಿಲ್ ಆಗಿದೆ.
ವನಿತಾ ಐತಾಳ್ ದುರಾಸೆಯೂ ದೋಸ್ತಿ ಕುಸ್ತಿಗೆ ಕಾರಣವಾಯ್ತಾ..? ಎಂಬ ಪ್ರಶ್ನೆ ಮೂಡಿದ್ದು, ವನಿತಾ ಐತಾಳ್ ಚಿನ್ನದ ಕಹಾನಿ ಬಗೆದಷ್ಟು ಬಯಲಾಗ್ತಿದೆ. ಶ್ರೀಮಂತರು, ರಾಜಕಾರಣಿಗಳೇ ಈಕೆಯ ಟಾರ್ಗೆಟ್ ಅಂತೆ. ಗಣ್ಯರನ್ನು ವಾರಾಹಿ ಜುವೆಲ್ಲರ್ಸ್‌ಗೆ ಆಹ್ವಾನಿಸಿ ಮೊದಲು ಫೋಟೋ ನಂತರ ಹೂಡಿಕೆಗೆ ಆಮಿಷವೊಡ್ಡಿ, ಇದೇ ಫೋಟೋ ಬಳಸಿ ದೊಡ್ಡದೊಡ್ಡವರಿಗೆ ಗಾಳ ಹಾಕ್ತಿದ್ಳಂತೆ ವನಿತಾ.
ಇದೀಗ ನನ್ನನ್ನು ಕೆಟ್ಟವಳನ್ನಾಗಿ ಬಿಂಬಿಸಿ ಏನು ಲಾಭ ಮಾಡಲು ಹೊರಟಿದ್ದಾಳೆ? ವನಿತಾ ಅಂತ ಐಶ್ವರ್ಯ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಓಂಕಾರ್ ಕೋ.ಅಪರೇಟಿವ್ ಸಂಘದಲ್ಲಿ ಹಣವೇ ಖಾಲಿ ಆಗಿದೆ. ಅಲ್ಲಿ ಎಷ್ಟು ಜನರ ಜೀವನ ಹಾಳು ಮಾಡಿದ್ದಾಳೆ ಹೇಳಲಿ ಎಂದು ಐಶ್ವರ್ಯಗೌಡ ಸವಾಲ್ ಹಾಕಿದ್ದಾರೆ.
PublicNext
28/12/2024 11:27 am