ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಆರ್ ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಅತ್ಯಾಚಾರ, ಹನಿಟ್ರ್ಯಾಪ್, ವಿರೋಧಿಗಳಿಗೆ HIV ಸೋಂಕು ತಗಲುವ ಪ್ರಯತ್ನದ ಕೇಸ್ ಸಂಬಂಧ ಎಸ್ ಐ ಟಿ ತಂಡ ಕೋರಟ್ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಮುನಿರತ್ನ ವಿರುದ್ಧ ಆರೋಪಗಳು ಸಾಬೀತು ಎಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಎಸ್ ಐಟಿ ತಂಡ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮುನಿರತ್ನ ಸೇರಿದಂತೆ A 3 ಸುಧಾಕರ್, A 7- ಶ್ರೀನಿವಾಸ್ ಪಿ, A8 ಇನ್ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಸೆಪ್ಟೆಂಬರ್ 18ರಂದು 7 ಜನರ ವಿರುದ್ದ ದಾಖಲಾಗಿದ್ದ ಪ್ರಕರಣದಲ್ಲಿ ಸದ್ಯ ಎಸ್ ಐಟಿ ತನಿಖೆ ನಡೆಸಿ ಒಟ್ಟು 2,481 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿ ಮಾಡಿದೆ.

ಪ್ರಕರಣ ಸಂಬಂಧ 146 ಸಾಕ್ಷಿಗಳನ್ನ ವಿಚಾರಣೆಗೊಳಪಡಿಸಿದ್ದು, ಅದರಲ್ಲಿ ನ್ಯಾಯಾಧೀಶರ ಮುಂದೆ 8 ಸಾಕ್ಷಿಧಾರರ ಹೇಳಿಕೆ ದಾಖಲಿಸಲಾಗಿದ ಬಳಿಕ 850 ದಾಖಲೆಗಳನ್ನು ಒಳಗೊಂಡ 2,481 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಐಪಿಸಿ 376(2)ಎನ್ (ನಿರಂತರ ಅತ್ಯಾಚಾರ), 3081202 (ಅಪರಾಧಿಕ ಸಂಚು), 504 (ಉದ್ದೇಶ ಪೂರ್ವಕ ಅವಮಾನ), 506 ( ), 270 (ಅಪಾಯಕಾರಿ ರೋಗ ಹರಡುವಿಕೆ) ಸೆಕ್ಷನ್ ಅಡಿಯಲ್ಲಿ ಆರೋಪಿಗಳ ವಿರುದ್ದ ಪ್ರಮುಖವಾಗಿ ಲೈಂಗಿಕ ಕಿರುಕುಳಕ್ಕಾಗಿ ಐಪಿಸಿ 354ಎ, ಅನುಮತಿ ಇಲ್ಲದೆ ಮಹಿಳೆ ಯ ಅಶ್ಲೀಲ ದೃಶ್ಯ ಸೆರೆಹಿಡಿದಿರುವುದಕ್ಕೆ ಸೆಕ್ಷನ್ 354 ಸಿ, ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಕ್ಕಾಗಿ ಐಪಿಸಿ ಸೆಕ್ಷನ್ 376 (2) (n), ಸಂತ್ರಸ್ತೆಯ ಕೊಲ್ಲುವ ಉದ್ದೇಶಕ್ಕೆ ಸೆಕ್ಷನ್ 308, ಅಪರಾಧಿಕ ಒಳಸಂಚಿಗೆ ಸೆಕ್ಷನ್ 120 B, ಉದ್ದೇಶಪೂರ್ವಕವಾಗಿ ಅವಮಾನಕ್ಕಾಗಿ ಸೆಕ್ಷನ್ 504, ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯಕ್ಕಾಗಿ ಸೆಕ್ಷನ್ 270 ಮತ್ತು ವ್ಯಕ್ತಿಯ ಖಾಸಗಿ ಚಿತ್ರವನ್ನ ಒಪ್ಪಿಗೆಯಿಲ್ಲದೆ ಸೆರೆಹಿಡಿದಿದ್ದಕ್ಕೆ ಐಟಿ ಕಾಯ್ದೆ 2000ರ ಸೆಕ್ಷನ್ 66E ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ‌.

ತನಿಖೆಯ ವೇಳೆ ಮುನಿರತ್ನ ಕ್ರಿಮಿನಲ್ ಚಟುವಟಿಕೆಗೆ ಇನ್ಸ್‌ಪೆಕ್ಟರ್ ಐಯ್ಯಣ್ಣ ರೆಡ್ಡಿ ಸಹಕರಿಸಿದ್ದು ಪತ್ತೆಯಾದ ಹಿನ್ನಲೆ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಬಂಧಿಸಿದ್ರು. ಸದ್ಯ ಪ್ರಕರಣ ಸಂಬಂಧ ಹೆಚ್ಚುವರಿ ಸಾಕ್ಷಿ ಕಲೆಹಾಕಲು‌ ತನಿಖೆ ಮುಂದುವರೆದಿದ್ದು, ನವೆಂಬರ್ 30ರಂದು ಮುನಿರತ್ನ ವಿರುದ್ದ ಜಾತಿನಿಂದನೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.

ಸದ್ಯ ಗುತ್ತಿಗೆದಾರನ ಬಳಿ ಲಂಚ ಕೇಳಿದ ಕೇಸ್ ಸಂಬಂಧ ಪ್ರಾಸಿಕ್ಯೂಷನ್ ಅನುಮತಿಗೆ ಎಸ್‌ಐಟಿ ಕಾಯುತ್ತಿದೆ.

Edited By : Abhishek Kamoji
PublicNext

PublicNext

28/12/2024 10:39 am

Cinque Terre

21.79 K

Cinque Terre

0

ಸಂಬಂಧಿತ ಸುದ್ದಿ