ಬೆಂಗಳೂರು : ಬೀದರ್ ನಲ್ಲಿ ಗುತ್ತಿಗೆದಾರ ಸಚಿನ ಆತ್ಮಹತ್ಯೆ ಮಾಡಿಕೊಂಡುವ ಘಟನೆ ನಡೆಯಬಾರದಿತ್ತು ಆ ಯುವಕನ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಸಿಗಲಿ ಎಂದು ಸಚಿವ ಪ್ರೀಯಾಂಕ್ ಖರ್ಗೆ ವಿಷಾದ ವ್ಯಕ್ತಪಡಿಸಿದರು.
ಈ ಕುರಿತಂತೆ ತಮ್ಮ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಡಿದ ಅವರು, ವಿಪಕ್ಷಗಳ ನಾಯಕರು ಸುದ್ದಿಗೊಷ್ಠಿ ನಡೆಸಿ ಕಲ್ಬುರ್ಗಿ ಒಂದು ರಿಪಬ್ಲಿಕ್ ಆಗಿದೆ ಎಂದಿದ್ದಾರೆ ಹೌದು ಕಲಬುರಗಿ ರಿಪಬ್ಲಿಕ್ ಆಗಿರೋದು ಹೌದು ಆದರೆ ಬಳ್ಳಾರಿ ರೀತಿಯಲ್ಲ ಅಭಿವೃದ್ಧಿಯ ರಿಪಬ್ಲಿಕ್ ಆಗಿದೆ ಕಲಬುರಗಿ ತಿರುಗೇಟು ನೀಡಿದರು.
ನಿಮ್ಮ ಅವಧಿಯಲ್ಲಿ ಮಾಡಿದ ದೌರ್ಜನ್ಯದ ಬಳ್ಳಾರಿ ರಿಪಬ್ಲಿಕ್ ಅಲ್ಲಾ ನಮ್ಮದು ಅಭಿವೃದ್ಧಿ ರಿಪಬ್ಲಿಕ್ ಎಂದರು.ಬಿಜೆಪಿ ಹೈಕಮಾಂಡ್ ಗೆ ಸಲಹೆ ಕೊಡ್ತೇನೆ. ನಮ್ಮ ಬಗ್ಗೆ ಮಾತಾಡೋ ಮೊದಲು ಕಲಬುರಗಿಯ ನಿಮ್ಮ ನಾಯಕರ ಬಗ್ಗೆ ತಿಳಿದುಕೊಳ್ಳಿ, ಅವರು ಏನ್ ಮಾಡ್ತಾರೆ ಎನ್ನೋದು ಕೇಳಿ, ಕಲಬುರಗಿಯಲ್ಲಿ ಐಪಿಎಲ್ ಬಟ್ಟಿಂಗ್ ಸ್ಯಾಂಡ್ ಮಾಫಿಯಾ ಮಾಡ್ತಿರೋದು ಯಾರು ಕೇಳಿ, ಪರಿತರ ಅಕ್ಕಿ ಹಾಲಿನ ಪೌಡರ್ ಪ್ರಕರಣ ಯಾರ ಮೇಲೆ ದಾಖಲಾಗಿದೆ ಅವರು ಯಾರ ಪಕ್ಷದವರು ಎಂದು ಕೇಳಿ, ಕಳೆದ ಕೆಲತಿಂಗಳ ಹಿಂದೆ ಬೇಲ್ ಮೇಲೆ ಆಚೆ ಬಂದವರು ಯಾರು ತಿಳಿದುಕೊಳ್ಳಿ ನಮ್ಮ ಕಾಂಗ್ರೆಸ್ ನವರನ್ನ ಕೇಳೋಕೆ ಹೋಗಬೇಡಿ ನಿಮ್ಮ ಪಕ್ಷದವರನ್ನೇ ಕೇಳಿ ತಿಳಿದುಕೊಳ್ಳಿ ಎಂದರು.
PublicNext
28/12/2024 09:17 pm