ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಶಾಲನಗರದಲ್ಲಿ ಶಾಸಕ‌ ಮಂತರ್ ಗೌಡರೊಂದಿಗೆ ಸಂವಾದ: ನಗರ ಅಭಿವೃದ್ಧಿ ಬಗ್ಗೆ ಚರ್ಚೆ

ಕುಶಾಲನಗರ: ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ವತಿಯಿಂದ ಮಡಿಕೇರಿ ಕ್ಷೇತ್ರ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ ಕನ್ನಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕುಶಾಲನಗರದ ಅಭಿವೃದ್ಧಿ ವಿಚಾರಕ್ಕೆ‌ ಸಂಬಂಧಿಸಿದಂತೆ ನೆರೆದಿದ್ದ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಶಾಸಕರೊಂದಿಗೆ ಚರ್ಚಿಸಿದರು. ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು, ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಚಿಂತನೆ‌ ಹರಿಸುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.

ಅಪೂರ್ಣವಾಗಿರುವ ಯುಜಿಡಿ, ಕಲಾಭವನ ಯೋಜನೆ, ಪುರಸಭೆ ವಾಣಿಜ್ಯ ಭವನ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಕಾಮಗಾರಿ ಪೂರ್ಣಗೊಳಿಸಬೇಕು, ಹಾರಂಗಿಯಿಂದ 24*7 ಕುಡಿವ ನೀರಿನ‌ ಯೋಜನೆ‌ ಅನುಷ್ಠಾನ, ಎರಡನೇ ಕೈಗಾರಿಕಾ ಬಡಾವಣೆ ಸ್ಥಾಪನೆ, ವಾಹನ ದಟ್ಟಣೆ ನಿಭಾಯಿಸಲು ರಿಂಗ್ ರೋಡ್ ಗಳ ನಿರ್ಮಾಣ, ಸುಸಜ್ಜಿತ ಕ್ರೀಡಾಂಗಣ, ದಿ.ಮಾಜಿ ಮುಖ್ಯಮಂತ್ರಿ ಗುಂಡುರಾವ್ ಪುತಃಳಿ ಸ್ಥಾಪನೆ, ಹೃದ್ರೋಗ ಘಟಕ ಸ್ಥಾಪನೆ, ಬೀದಿನಾಯಿಗಳ‌ ಹಾವಳಿ ನಿಯಂತ್ರಣ, ರುದ್ರ ಭೂಮಿಯಲ್ಲಿ ಎಲೆಕ್ಟ್ರಿಕ್ ಬರ್ನಿಂಗ್ ಹೆಚ್ಚುವರಿ ವ್ಯವಸ್ಥೆ, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಬೇಕು, ಕಾವೇರಿ ನದಿಯಲ್ಲಿ ಶಿಲ್ಟ್ ಸ್ಥಳಾಂತರ, ಜಿಎಂಪಿ ಶಾಲೆ ಮುಂಭಾಗ ಸ್ಕೈವಾಕ್ ನಿರ್ಮಾಣ ಎಂಬಿತ್ಯಾದಿ ಬೇಡಿಕೆಗಳನ್ನು ಸಭೆಯಲ್ಲಿದ್ದ ಗಣ್ಯರು ಶಾಸಕರ ಮುಂದಿಟ್ಟರು.

ಈ ಸಂದರ್ಭ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಸಭೆಯಲ್ಲಿ‌ ಕೇಳಿಬಂದ ಹಲವು ಸಲಹೆಗಳ ಬಗ್ಗೆ ಈಗಾಗಲೆ‌ ನಾನು ಚಿಂತನೆ ಹರಿಸಿದ್ದೇನೆ. ಯುಜಿಡಿ ಕಾಮಗಾರಿ ಚಾಲನೆ ಹಂತದಲ್ಲಿದೆ, ಅಮೃತ್ 2 ಯೋಜನೆಯಡಿ 40 ಕೋಟಿ ರೂ ವೆಚ್ಚದಲ್ಲಿ ಹಾರಂಗಿ-ಕೂಡಿಗೆ‌ ನದಿಗಳ ಸಂಗಮ ಭಾಗದಿಂದ ನೀರೆತ್ತಿ ಪೂರೈಸುವ ಯೋಜನೆ ಕಾಮಗಾರಿ ಈಗಾಗಲೆ ಪ್ರಗತಿಯಲ್ಲಿದೆ. ಇದರಿಂದ ಬೇಸಿಗೆಯಲ್ಲಿ ‌ಕುಡಿವ ನೀರಿನ ಅಭಾವ ನೀಗಲಿದೆ.

ಅಪೂರ್ಣವಾಗಿರುವ ಪುರಸಭೆ ವಾಣಿಜ್ಯ‌ ಭವನವನ್ನು ಹೆಚ್ಚುವರಿ ಎರಡು ಕೋಟಿ ವಿನಿಯೋಗಿಸಿ ಪೂರ್ಣಗೊಳಿಸಲಾಗುವುದು, ಕಲಾಭವನ ಕಾಮಗಾರಿ ಕೆಲವು ತಾಂತ್ರಿಕ‌ ಸಮಸ್ಯೆಯಿಂದ ನಿಧಾನವಾಗಿದ್ದು ಐದಾರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ, ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆಗೇರಿಸುವ ಸಂಬಂಧ ಜಾಗದ ವಿವಾದ ನ್ಯಾಯಾಲಯದಲ್ಲಿರುವ ಬಗ್ಗೆ ಸಭೆಯ ಗಮನಕ್ಕೆ‌ ತಂದರೂ, ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಹೃದ್ರೋಗ ಘಟಕ ತೆರೆಯಲು ಈಗಾಗಲೆ ಕ್ರಮವಹಿಸಲಾಗಿದೆ, ಕುಶಾಲನಗರ ಸಾರಿಗೆ ಬಸ್ ನಿಲ್ದಾಣ ಅಭಿವೃದ್ಧಿಗೆ ಈಗಾಗಲೆ ಸಾರಿಗೆ ಸಚಿವರ ಗಮನ ಸೆಳೆಯಲಾಗಿದೆ ಎಂದರು.

Edited By : PublicNext Desk
Kshetra Samachara

Kshetra Samachara

27/12/2024 06:45 pm

Cinque Terre

280

Cinque Terre

0

ಸಂಬಂಧಿತ ಸುದ್ದಿ