ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒರಾಯನ್ ಮಾಲ್ ಸಿಬ್ಬಂದಿ ನಿರ್ಲಕ್ಷ್ಯ - ಕಾಲು ಮುರಿದುಕೊಂಡ ಯುವಕ

ಬೆಂಗಳೂರು: ಮಾಲ್‌ಗಳಲ್ಲಿ ಮಕ್ಕಳಿಗೆ ಅಡ್ವೆಂಚರ್ ಗೇಮ್ ಆಡಿಸ್ತೀರಾ? ಹಾಗಾದ್ರೆ ನೀವು ಈ ಸ್ಟೋರಿ ನೋಡಲೇಬೇಕು. ಪ್ರತಿಷ್ಠಿತ ಮಾಲ್ ನಲ್ಲಿ ಆಟ ಆಡಲು ಹೋಗಿ ಯುವಕನೊಬ್ಬ ಕಾಲು ಮುರಿದುಕೊಂಡಿರೋ ಘಟನೆ ಒರಾಯನ್ ಮಾಲ್‌ನಲ್ಲಿ ನಡೆದಿದೆ.

ಸುರಕ್ಷತಾ ಕ್ರಮ ಇಲ್ಲ, ಆ್ಯಂಬುಲೆನ್ಸ್ ಸೌಲಭ್ಯ ಇಲ್ಲದ ಒರಾಯನ್ ಮಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಒರಾಯನ್ ಮಾಲ್‌ನ ನಾಲ್ಕನೇ ಮಹಡಿಯಲ್ಲಿರುವ Bounce INC Trampoline Facility ನಲ್ಲಿ ಘಟನೆ ನಡೆದಿದ್ದು, ಮಾಕರ್ ನಿರಂಜನ್ (16) ಕಾಲು ಮುರಿದುಕೊಂಡಿದ್ದಾನೆ.

ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ನಿರಂಜನ್ ತಂದೆ ಪ್ಯಾಟ್ರಿಕ್ ಕುಮಾರ್ ಒರಾಯನ್ ಮಾಲ್ ವಿರುದ್ಧ ದೂರು ನೀಡಿದ್ದಾರೆ. ಮಗ ಆಟ ಆಡಲು ಹೋದಾಗ ಕೆಳಗೆ ಬಿದ್ದು ಕಾಲು ಮುರಿದಿದೆ. ಸಿಬ್ಬಂದಿಯಿಂದ ಪ್ರಥಮ ಚಿಕಿತ್ಸೆ ಮಾಡುವಾಗ ತಪ್ಪಾಗಿದ್ದು, ಘಟನೆ ನಡೆದು 45 ನಿಮಿಷದ ಬಳಿಕ ಹಾಸ್ಪಿಟಲ್ ಅಡ್ಮಿಟ್ ಮಾಡಲಾಗಿದೆ. ಮಾಲ್‌ನಲ್ಲಿ ಆ್ಯಂಬುಲೆನ್ಸ್ ಸೌಲಭ್ಯ, ಮೆಡಿಕಲ್ ಸೌಲಭ್ಯ ನೀಡಿಲ್ಲ.

ಸರಿಯಾದ ಸುರಕ್ಷತಾ ಕ್ರಮಗಳು ಇಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದು ಪ್ಯಾಟ್ರಿಕ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Edited By : Somashekar
PublicNext

PublicNext

27/12/2024 12:09 pm

Cinque Terre

26.17 K

Cinque Terre

0

ಸಂಬಂಧಿತ ಸುದ್ದಿ