ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ಉದ್ಘಾಟನೆಗೆ ಸಿದ್ಧಗೊಂಡ ಮೃತ ದಸರಾ ಅರ್ಜುನ ಆನೆಯ ಪ್ರತಿಮೆ

ಸಕಲೇಶಪುರ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಮರಣ ಹೊಂದಿದ್ದ ಅಂಬಾರಿ ಆನೆ, ಅರ್ಜುನನ ಪ್ರತಿಮೆ ಹಾಗೂ ಸ್ಮಾರಕ ಉದ್ಘಾಟನೆಗೆ ಸಿದ್ಧಗೊಂಡಿದೆ.

2023 ಡಿಸೆಂಬರ್ 4ರಂದು ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ಕಾದಾಡಿ ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ ಕಾಡಿನಲ್ಲೇ ಸಾವನ್ನಪ್ಪಿತ್ತು. ಅರ್ಜುನ ಸಾವನ್ನಪ್ಪಿ ಒಂದು ವರ್ಷ ಕಳೆದ ನಂತರ ಅರ್ಜುನನ ಸ್ಮಾರಕ ಹಾಗೂ ಪುತ್ಥಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಅರ್ಜುನನ ಪ್ರತಿಮೆ ಫೋಟೋಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಅರ್ಜುನನ ಪ್ರತಿಮೆ ಹಾಗೂ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ. ಡಿಸೆಂಬರ್‌ 4 ರಂದು ಅರ್ಜುನ ಮೃತ ಸ್ಥಳದಲ್ಲಿ ಸ್ಮಾರಕ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮ ನಿಗದಿಯಾಗಿತ್ತು. ಪುತ್ಥಳಿ ಕಾರ್ಯ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ಮುಂದೂಡಲಾಗಿತ್ತು.

Edited By : Vijay Kumar
PublicNext

PublicNext

26/12/2024 08:55 pm

Cinque Terre

20.97 K

Cinque Terre

1

ಸಂಬಂಧಿತ ಸುದ್ದಿ