Av
Headline
ಕೋಲಾರ - ಬಡವರಿಗೆ ಮಂಜೂರಾದ ಜಾಗದಲ್ಲಿ ಪ್ರಭಾವಿಗಳಿಗೆ ಅಕ್ರಮ ಖಾತೆ ಸೃಷ್ಟಿ ಕ್ರಮಕ್ಕೆ ಗ್ರಾಮಸ್ಥರ ಮನವಿ
ಕೋಲಾರ: ತಾಲೂಕಿನ ನರಸಾಪುರ ಹೋಬಳಿಯ ರಾಮಸಂದ್ರ ಗ್ರಾಮದಲ್ಲಿ ಅನಧಿಕೃತ ಹೊಸದಾಗಿ ಸರ್ವೇ ನಂ ಸೃಷ್ಟಿಸಿಕೊಂಡು ಖಾತೆಗಳನ್ನು ಮಾಡಿರುವ ರಾಜಸ್ವ ನಿರೀಕ್ಷಕ ಲೋಕೇಶ್ ಹಾಗೂ ಬೆಳ್ಳೂರು ಗ್ರಾಪಂ ಪಿಡಿಒಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ರಾಮಸಂದ್ರ ಗ್ರಾಮಸ್ಥರು ತಹಶಿಲ್ದಾರ್ ಡಾ ಎಂ ನಯನ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡ ಕೋಟೆ ಶ್ರೀನಿವಾಸ್ ಮಾತನಾಡಿ ರಾಮಸಂದ್ರ ಗ್ರಾಮದಲ್ಲಿ ಸರ್ವೇ ನಂ 106, 44, 94,115 ರಲ್ಲಿ ಅನಧಿಕೃತ ಹೊಸ ದಾಖಲೆಗಳನ್ನು ಸೃಷ್ಟಿಸಿಕೊಂಡು ಹಿಂದೆ ಬಡವರಿಗೆ ಮಂಜೂರು ಆಗಿರುವ ಜಾಗದಲ್ಲಿ ಗ್ರಾಮಕ್ಕೆ ಸೇರದ ಪ್ರಭಾವಿಗಳಿಗೆ ದಾಖಲೆಗಳನ್ನು ಮಾಡಿಕೊಟ್ಟಿದ್ದಾರೆ ಇದರಿಂದಾಗಿ ಗ್ರಾಮದಲ್ಲಿ ಅಶಾಂತಿ ಕದಡಲು ಹೊರಟಿದ್ದಾರೆ ಇದಕ್ಕೆ ಮೂಲ ಕಾರಣ ಆರ್.ಐ ಲೋಕೇಶ್ ಮತ್ತು ಬೆಳ್ಳೂರು ಗ್ರಾಪಂ ಪಿಡಿಒಗಳು ಕಾರಣವಾಗಿದ್ದು ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
Kshetra Samachara
26/12/2024 06:54 pm