ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ:14 ಕೇಂದ್ರಗಳಲ್ಲಿ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಪರೀಕ್ಷೆ

ಕೋಲಾರ: ನಗರದ 14 ಕೇಂದ್ರಗಳಲ್ಲಿ ಭಾನುವಾರ 2023-24 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆಯನ್ನು ನಡೆಸಲಾಯಿತು. ಪರೀಕ್ಷೆಗೆ ಒಟ್ಟು 5718 ಮಂದಿ ಕುಳಿತಿದ್ದು, ಎಲ್ಲಾ 14 ಕೇಂದ್ರಗಳು ಕೋಲಾರ ನಗರದಲ್ಲೇ ಇದ್ದು, ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರೀಕ್ಷೆಗೆ ಆಗಮಿಸುವ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅವಕಾಶವನ್ನು‌ ಕಲ್ಪಿಸಲಾಗಿತ್ತು. ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಉಳಿದ ಅಭರಣಗಳನ್ನು ಧರಿಸಲು ನಿಷೇಧಿಸಿದ್ದು, ಪೂರ್ಣ ತೋಳಿನ ಶರ್ಟ್, ಶೂ ಹಾಕಿದ್ದರೂ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್

ಮಾಡಲಾಗಿತ್ತು.

Edited By : PublicNext Desk
Kshetra Samachara

Kshetra Samachara

29/12/2024 04:13 pm

Cinque Terre

660

Cinque Terre

0

ಸಂಬಂಧಿತ ಸುದ್ದಿ