ಬಂಗಾರಪೇಟೆ - ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ತಹಶೀಲ್ದಾರ್ ಹುದ್ದೆಯ ಕುರ್ಚಿ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿ ಭಾರೀ ಹೈಡ್ರಾಮಾ ನಡೆದಿದೆ. ವೆಂಕಟೇಶಪ್ಪ ಹಾಗೂ ಸುಜಾತ ನಡುವೆ ತಹಶೀಲ್ದಾರ್ ಕುರ್ಚಿಗಾಗಿ ಕಿತ್ತಾಟ ನಡೆದಿದೆ.
ವೆಂಕಟೇಶಪ್ಪ ಡಿ. 31ರಂದು ವರ್ಗಾವಣೆ ಆಗಿದ್ದರು. ನಂತರ ತಹಶೀಲ್ದಾರ್ ಸುಜಾತ ಅವರು ವರ್ಗಾವಣೆಯಾದ ಸ್ಥಳಕ್ಕೆ ನಿಯುಕ್ತಿಗೊಂಡಿದ್ದರು. ವೆಂಕಟೇಶಪ್ಪ ಅವರನ್ನು ಕೇವಲ ಐದು ತಿಂಗಳಿಗೆ ವರ್ಗಾವಣೆ ಮಾಡಿ ಎಂದು ಸರ್ಕಾರ ಆದೇಶಿತ್ತು.
ಹೀಗಾಗಿ ವೆಂಕಟೇಶಪ್ಪ ವರ್ಗಾವಣೆಗೆ ಸಂಬಂಧಿಸಿ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದು ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ತಹಶೀಲ್ದಾರ್ ಕೊಠಡಿಗೆ ಬೀಗ ಹಾಕಿ ಸುಜಾತ ಅಲ್ಲೇ ಕುಳಿತಿದ್ದಾರೆ. ಈ ಸಂಬಂಧ ತಹಶೀಲ್ದಾರ್ ಕಚೇರಿಯಲ್ಲಿ ಹೈಡ್ರಾಮಾ ನಡೆದಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
PublicNext
04/01/2025 04:46 pm