ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ನೂತನ ಡಿಸಿಎಫ್ ಗೆ ಅಧಿಕಾರ ಹಸ್ತಾಂತರಿಸಿದ ಏಡುಕೊಂಡಲು

ಕೋಲಾರ : 'ಜಿಲ್ಲೆಯಲ್ಲಿ ಕಳೆದ 28 ತಿಂಗಳಲ್ಲಿ 2,800 ಎಕರೆ ಒತ್ತುವರಿ ತೆರವು ಮಾಡಿದ್ದು, ಸುಮಾರು 10 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು‌ ವಾಪಸ್ ಬಂದಿದೆ' ಎಂದು ಐಎಫ್ಎಸ್ ಅಧಿಕಾರಿ‌ ಏಡುಕೊಂಡಲು ತಿಳಿಸಿದರು. ಹಾಸನ ವೃತ್ತರದ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಸಿಎಫ್)ಬಡ್ತಿ ಪಡೆದು ವರ್ಗಾವಣೆಗೊಂಡಿರುವ ಅವರು ನೂತನ ಡಿಸಿಎಫ್ ಸರೀನಾ ಅವರಿಗೆ ಅಧಿಕಾರ ಹಸ್ತಾಂತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

'ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಸರ್ವೆ ಸಂಖ್ಯೆ 1 ಹಾಗೂ 2ರ ಜಮೀನಿನ ವಿಚಾರವು ಒಂದು ಹಂತಕ್ಕೆ ತಲುಪಿದೆ. ಜ.15 ಕ್ಕೆ ಜಂಟಿ ಸರ್ವೇ ಕಾರ್ಯ ನಡೆಸಲು ಹೈಕೋರ್ಟ್ ಕೂಡ ನಿರ್ದೇಶನ ನೀಡಿದೆ' ಎಂದರು. 'ಒಂದು‌ ಬಾರಿ ನ್ಯಾಯಾಲಯದಲ್ಲಿ ಅರಣ್ಯ ಎಂದು ತೀರ್ಪು ನೀಡಿದ‌ ಮೇಲೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅರಣ್ಯ ಒತ್ತುವರಿದಾರರು ಸ್ವಯಂಪ್ರೇರಿತವಾಗಿ ಬಿಟ್ಟುಕೊಟ್ಟರೆ ಮಾನ, ಮರ್ಯಾದೆ ಉಳಿಯುತ್ತದೆ. ಅರಣ್ಯ ಒತ್ತುವರಿ ಎಂಬುವುದು ಭೂತ ಇದ್ದಂತೆ. ಅದನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ' ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

04/01/2025 02:06 pm

Cinque Terre

280

Cinque Terre

0