ಕೋಲಾರ - ಕೋಲಾರ ನಗರದ ಕೋಟೆಯಲ್ಲಿ ನೆಲೆಗೊಂಡಿರುವ ನಗರ ದೇವತೆ,ಚಾಮುಂಡೇಶ್ವರಿ ಬಿರುದಾಂಕಿತ ಕೋಲಾರಮ್ಮನ ದೇವಾಲಯದಲ್ಲಿ 2025 ನೂತನ ವರ್ಷದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಬೆಳಗ್ಗೆ ಪಂಚಾಮೃತ ಅಭಿಷೇಕ, ಸಹಸ್ರನಾಮರ್ಚನೆ ಹಾಗೂ ವಿಶೇಷ ಹೂವಿನ ಅಲಂಕಾರವನ್ನು ಏರ್ಪಡಿಸಲಾಗಿತ್ತು. ಭಕ್ತಾದಿಗಳು ಬೆಳಗಿನಿಂದ ದೇವಾಲಯಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದೇವಾಲಯಕ್ಕೆ ಸಾವಿರಾರು ಜನ ಭೇಟಿ ಕೊಟ್ಟಿದ್ದು ವಿಶೇಷವಾಗಿತ್ತು. ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ದೇವಾಲಯದ ಎಲ್ಲಾ ಪೂಜಾ ಕಾರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕರಾದ ಸೋಮಶೇಖರ್ ದೀಕ್ಷಿತ್, ವಿನಯ್ ದೀಕ್ಷಿತ್ ನೆರವೇರಿಸಿಕೊಟ್ಟರು.
Kshetra Samachara
01/01/2025 07:13 pm