ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ನಮ್ಮ ಕರ್ನಾಟಕ ಸೇನೆಯಿಂದ ನಗರದಲ್ಲಿ ವಿಶ್ವಮಾನವ ಕುವೆಂಪು ಜನ್ಮದಿನಾಚರಣೆ

ಕೋಲಾರ: ನಗರದ ಕಿತ್ತೂರಾಣಿ ಚೆನ್ನಮ್ಮ ವೃತ್ತದಲ್ಲಿ ವಿಶ್ವಮಾನವ, ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಮರಹಳ್ಳಿ ನಾಗರಾಜ್, ಕುವೆಂಪುರವರ ವಿಚಾರ ಧಾರೆಗಳು ಇಂದಿಗೂ ಮನುಷ್ಯ ಕುಲಕ್ಕೆ ನೀಡಿದ ಆದರ್ಶಗಳು ಮತ್ತು ಮಾರ್ಗದರ್ಶನ ಸಾರ್ವಕಾಲಿಕ ಸತ್ಯ. ಕುವೆಂಪುರವರ ಚಿಂತನೆ ತತ್ವ ಆದರ್ಶಗಳ ಮೂಲಕ ವಿಶ್ವವ್ಯಾಪಿ ಹೆಸರನ್ನು ಮಾಡಿದ ಮೇರು ಕವಿಯಾಗಿದ್ದಾರೆ. ನೈಸರ್ಗಿಕ ಕವಿಯಾಗಿ ಸಮುದಾಯದ ಮತ್ತು ಸಮಾಜದ ಸ್ಥಿತಿಗತಿಗಳನ್ನು ವಾಸ್ತವಾಗಿ ತಮ್ಮ ಕಾವ್ಯಗಳಲ್ಲಿ ಕಟ್ಟಿಕೊಡುವ ಮೂಲಕ ವಿಶ್ವ ಮಾನವ ಸಂದೇಶವನ್ನು ಸಾರುತ್ತಿದರು ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

29/12/2024 04:17 pm

Cinque Terre

680

Cinque Terre

0

ಸಂಬಂಧಿತ ಸುದ್ದಿ