ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಬೈಕ್ ಸವಾರ ಸಾವು ಪ್ರಕರಣ - ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ

ಬೆಳ್ತಂಗಡಿ ಸರಕಾರಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ ಹಾಗೂ ದಂಡ ಪ್ರಕಟವಾಗಿದೆ.

2022ರ ಡಿ. 20ರಂದು ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ವಿಜಯ್ ಅವರು ತನ್ನಬೈಕ್‌ನಲ್ಲಿಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕು ಲ್ಯಾಲ ಗ್ರಾಮದ ಕಕ್ಕೇನಾ ಎಂಬಲ್ಲಿ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ವಿಜಯ್ ಅವರಿಗೆ ಗಂಭೀರ ಗಾಯ ವಾಗಿತ್ತು. ವಿಜಯ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು.

ಸಹಸವಾರ ಶೈಲೇಶ್ ಅವರ ಬಲಕಾಲಿನ ತೊಡೆಗೆ ಗುದ್ದಿದ ಗಾಯವಾಗಿದ್ದು, ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದರು. ಈ ಬಗ್ಗೆ ಶೈಲೇಶ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಆರೋಪಿ ಬಸ್ ಚಾಲಕ ಧಾರವಾಡ ದ ಅಶೋಕ ಭೋಸಲೆ (59) ಅವರಿಗೆ ಶಿಕ್ಷೆ ಪ್ರಕಟವಾಗಿದೆ.

ಪ್ರಕರಣದಲ್ಲಿ ವಿಚಾರಣೆ ನಡೆಸಿದ ಬೆಳ್ತಂಗಡಿ ಪ್ರಾಂಶುಪಾಲ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಸಂದೇಶ ಕೆ. ಅವರು ಪ್ರಕರಣದಲ್ಲಿ ಬಸ್ ಚಾಲಕ ಅಶೋಕ್‌ ಅವರ ಮೇಲಿನ ಆರೋಪ ಸಾಬೀತಾಗಿರುವುದರಿಂದ ಡಿ. 23ರಂದು ಒಂದು ತಿಂಗಳು ಜೈಲು ಮತ್ತು 1,500 ರೂ. ದಂಡ ವಿಧಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಶಿವಕುಮಾರ ಬಿ. ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಸರಕಾರದ ಪರ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಆಶಿತಾ ಎಂ.ಎ. ಅವರು ವಾದಿಸಿದ್ದರು.

Edited By : PublicNext Desk
Kshetra Samachara

Kshetra Samachara

26/12/2024 06:29 pm

Cinque Terre

1.4 K

Cinque Terre

0

ಸಂಬಂಧಿತ ಸುದ್ದಿ