ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೊಬೈಲ್ ವಿಚಾರಕ್ಕೆ ಕಲ್ಲಿನಿಂದ ಹೊಡೆದು‌ ವ್ಯಕ್ತಿ ಮೇಲೆ ಹಲ್ಲೆ!

ಉಡುಪಿ: ಮೊಬೈಲ್ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ರವಿ(30) ಹಲ್ಲೆಗೊಳಗಾದ ವ್ಯಕ್ತಿ, ರವಿ ಒಂದು ವಾರದ ಹಿಂದೆ ಕೂಲಿ ಕೆಲಸಕ್ಕಾಗಿ ಉಡುಪಿಗೆ ಬಂದಿದ್ದರು.

ಉಡುಪಿಯ ಮೂಡನಿಡಂಬೂರು ಬಸ್ ನಿಲ್ದಾಣ ಸಮೀಪದ ತಿರುಮಲ ಜ್ಯೂವಲೆರ್ಸ್ ಎದುರು ಸ್ನೇಹಿತ ಹನುಮಂತ ಜೊತೆ ಮೊಬೈಲ್ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಹನುಮಂತ , ರವಿಯವರ ತುಟಿ ಮತ್ತು ಕೆನ್ನೆಯ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ.

ನಂತರ ಕಾಲಿನಿಂದ ತುಳಿದು ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Ashok M
PublicNext

PublicNext

25/12/2024 06:18 pm

Cinque Terre

35.23 K

Cinque Terre

3

ಸಂಬಂಧಿತ ಸುದ್ದಿ