ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಯಂಗ್ಯ ಚಿತ್ರಕಾರ ಜಿ.ಎಂ. ಬೊಮ್ನಳ್ಳಿ ಗೆ 'ಹವ್ಯಕ ಸಾಧಕ ರತ್ನ' ಪ್ರಶಸ್ತಿ

ಶಿರಸಿ : ಬೆಂಗಳೂರು ಅರಮನೆ ಮೈದಾನದಲ್ಲಿ ಡಿ. 27 ರಿಂದ 29 ತನಕ ನಡೆಯಲಿದ್ದು, ಈ ಸಂದರ್ಭದಲ್ಲಿ ಸಮಾಜದ ಸಾಧಕರಿಗೆ ನೀಡಲಾಗುವ 'ಹವ್ಯಕ ಸಾಧಕ ರತ್ನ' ಪ್ರಶಸ್ತಿ ಗೆ ವ್ಯಂಗ್ಯಚಿತ್ರ ವಿಭಾಗದಿಂದ ವ್ಯಂಗ್ಯಚಿತ್ರಕಾರ ಶಿರಸಿಯ ಜಿ. ಎಂ. ಬೊಮ್ನಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.

ವ್ಯಂಗ್ಯ ಚಿತ್ರ ಕೃಷಿಯನ್ನು ನಿರಂತರವಾಗಿ ಮಾಡುತ್ತ, ಮಕ್ಕಳಿಗೆ 'ಸೊನ್ನೆ ಚಿತ್ರ' ಎನ್ನುವ ಸರಳ ಚಿತ್ರ ಕಲಿಕೆಯ ಪಾಠವನ್ನೂ ಮಾಡುತ್ತ ಬಂದಿರುವ ಅವರು ಕಳೆದ ಮೂವತ್ತು ವರ್ಷಗಳಿಂದ ರಾಜ್ಯದ ವಿವಿಧ ಪತ್ರಿಕೆಗಳಿಗೆ ವ್ಯಂಗ್ಯಚಿತ್ರ ಮತ್ತು ನುಡಿಚಿತ್ರ ಬರಹಗಳನ್ನು ಬರೆದುಕೊಂಡು ಬಂದಿದ್ದಾರೆ. ಈಗಾಗಲೇ ಇವರ 25 ಸಾವಿರ ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಹಳ್ಳಿಯಲ್ಲಿದ್ದುಕೊಂಡು ಮಾಡಿರುವ ಈ ಸಾಧನೆ ಗಮನಾರ್ಹವಾಗಿದೆ.

Edited By : Nirmala Aralikatti
Kshetra Samachara

Kshetra Samachara

26/12/2024 04:13 pm

Cinque Terre

9.52 K

Cinque Terre

0