ಅಂಕೋಲಾ: ಪರಿಸರ ಪ್ರೇಮಿ, ಕಾಡಿನ ವಿಶ್ವಕೋಶ, ವೃಕ್ಷ ಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಇನ್ನು ನೆನಪು ಮಾತ್ರ
ವಯೊ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ತುಳಸಿಗೌಡ (86) ಸೋಮವಾರ ಸಂಜೆ ಸುಮಾರಿಗೆ ಮೃತಪಟ್ಟಿದ್ದಾರೆ.
ತುಳಸಿ ಗೌಡಾ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸಿಯಾಗಿದ್ದರು. ತುಳಿಸಿ ಇವರು ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದ್ದ ಇವರು ವಿಶ್ವಕ್ಕೆ ಪರಿಸರದ ಬಗ್ಗೆ ಪಾಠಮಾಡಿದ್ದರು.
ತೀವ್ರತರವಾದ ಬಡತನವನ್ನು ಮೀರಿ ಹಸಿರು ಕ್ರಾಂತಿ ಮಾಡಿದ್ದ ಅಪ್ಪಟ ಪರಿಸರ ಪ್ರೇಮಿ ತುಳಸಿಗೌಡರ ಪರಿಸರ ಪ್ರೇಮವನ್ನ ಮೆಚ್ಚಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸುಬ್ರಾಯ ಮತ್ತು ಸೋನಿ ಎಂಬ ಇಬ್ಬರು ಮಕ್ಕಳನ್ನು ಹಾಗೂ ಅವರು ತಮ್ಮ ಅಪಾರ ಅಭಿಮಾನ ಬಳಗವನ್ನು ತುಳಸಿಗೌಡ ಅವರು ಅಗಲಿದ್ದಾರೆ.
PublicNext
16/12/2024 10:59 pm