ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : 'ದೇವೇಗೌಡರು ಎಷ್ಟೆಲ್ಲಾ ಕೆಲಸ ಮಾಡಿದ್ದಾರೆ ಅಂತ ಪಕ್ಷದವರಿಗೆ ಗೊತ್ತಿಲ್ಲ'- HDDಯನ್ನ ಹಾಡಿ ಹೊಗಳಿದ ಬಿಎಲ್ ಸಂತೋಷ್..!

ಬೆಂಗಳೂರು : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಹಿನ್ನೆಲೆ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆಯಿಂದ ಸುಶಾಸನ ದಿನಾಚರಣೆಯನ್ನ ಬೆಂಗಳೂರು ವಿವಿಯ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಶಾಸಕ ಡಾ. ಅಶ್ವಥ್ ನಾರಾಯಣ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತಿರಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾಜಿ ಪ್ರಧಾನಿ ದೇವೇಗೌಡರನ್ನ ಹಾಡಿ ಹೊಗಳಿದರು, ದೇವೇಗೌಡರು ಪ್ರಧಾನಿ ಆಗಿರುವುದು ನಮಗೆ ಗೊತ್ತಿದೆ. ಆದರೆ ಪ್ರಧಾನಿ ಆಗಿ ದೇವೇಗೌಡರು ಏನು ಮಾಡಿದ್ದಾರೆ ಅಂತ ಜೆಡಿಎಸ್ ಪಕ್ಷದವರಿಗೆ ಗೊತ್ತಿಲ್ಲ.

ಅವರಿಗೆ ಇದ್ದ ಕಡಿಮೆ ಅವಧಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಮಾಡುತ್ತಾರೆ, ನಾಗಾ ಬಂಡುಕೋರರ ಜೊತೆ ಸಂಧಾನಕ್ಕೆ ಜ್ಯೂರಿಚ್ ನಲ್ಲಿ ದೇವೇಗೌಡರು ಸಹಿ ಹಾಕಿದ್ದರು ಅಲ್ದೇ ಐಟಿ ಇಂಡಸ್ಟ್ರೀಗೆ ಟ್ಯಾಕ್ಸ್ ಹಾಲಿಡೇ ಕೊಟ್ಟಿದ್ದು ದೇವೇಗೌಡರು ಎಂದು ಅವರನ್ನ ಹಾಡಿ ಹೊಗಳಿದರು.

Edited By : Abhishek Kamoji
PublicNext

PublicNext

26/12/2024 03:41 pm

Cinque Terre

12.06 K

Cinque Terre

1

ಸಂಬಂಧಿತ ಸುದ್ದಿ