ಶಿವಮೊಗ್ಗ : ಶಿವಮೊಗ್ಗ ನಗರದ ಮೆಗ್ಗಾನ್ ಹೆರಿಗೆ ಮತ್ತು ಮಕ್ಕಳ ವಿಭಾಗದ ಶೌಚಾಲಯದಲ್ಲಿ ನವಜಾತ ಶಿಶುವೊಂದು ಶವವಾಗಿ ಪತ್ತೆಯಾಗಿದೆ. ಮನೆಯಲ್ಲಿ ಹೆರಿಗೆ ಆಗಿದೆ ಕಸ ತೆಗೆಯಬೇಕು ಎಂದು ಹೇಳಿ ಮೆಗ್ಗಾನ್ ಆಸ್ಪತ್ರೆಗೆ ಮಹಿಳೆಯೊಬ್ಬರು ದಾಖಲಾಗಿದ್ದಾರೆ, ನಂತರ ರಾತ್ರಿ 12 ಗಂಟೆಯ ಸುಮಾರಿಗೆ ಶೌಚಾಲಯದ ಡಸ್ಟ್ ಬಿನ್ ನಲ್ಲಿ ನವಜಾತ ಹೆಣ್ಣು ಶಿಶು ಶವವಾಗಿ ಪತ್ತೆಯಾಗಿದೆ.
ಆ ವೇಳೆ ಕಸತೆಗೆಸಬೇಕು ಎಂದು ದಾಖಲಾಗಿದ್ದ ಮಹಿಳೆ ಕೇಸ್ ಶೀಟ್ ಸಮೇತ ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಮಹಿಳೆಗೆ ಹೆರಿಗೆ ಆಗಿದ್ದು ಎಲ್ಲಿ, ನವಜಾತ ಶಿಶುವಿನ ಸಾವಿಗೆ ಕಾರಣ ಏನೆಂಬುದು ಪೊಲೀಸರ ತನಿಖೆ ಯಿಂದ ಹೊರಬರಬೇಕಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
PublicNext
26/12/2024 02:58 pm