ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಹೊಸ ವರ್ಷ ಸಂಭ್ರಮಾಚರಣೆ - ಪೊಲೀಸ್ ರೂಲ್ಸ್ ಹೀಗಿದೆ

ಶಿವಮೊಗ್ಗ: 2025ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ಹೋಂ ಸ್ಟೇ, ಹೋಟೆಲ್, ಲಾಡ್ಜ್, ಮತ್ತು ರೆಸಾರ್ಟ್ ಗಳ ಮಾಲೀಕರು ಹಾಗೂ ವ್ಯವಸ್ಥಾಪಕರೊಂದಿಗೆ ಜಿಲ್ಲಾ ಎಸ್.ಪಿ. ಮಿಥುನ್ ಕುಮಾರ್ ಸಭೆ ನಡೆಸಿದರು. ಸಭೆಯಲ್ಲಿ ಕೆಲ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.

1) ಹೊಸ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸುವ ಪೂರ್ವದಲ್ಲಿ, ಸರಹದ್ದಿನ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳುವುದು. ಪೊಲೀಸ್ ಇಲಾಖೆಯ ಗಮನಕ್ಕೆ ಬಾರದೆ / ಅನುಮತಿ ಪಡೆಯದೇ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.

2) ಕಾರ್ಯಕ್ರಮ ಆಯೋಜಿಸುವವರು ಸ್ಥಳಾವಕಾಶವನ್ನು ಗಮನದಲ್ಲಿಟ್ಟುಕೊಂಡು, ಅಷ್ಟೇ ಜನರಿಗೆ ಅನುಮತಿ ನೀಡುವುದು ಹಾಗೂ ಆಯೋಜಿಸಲಾಗುವ ಕಾರ್ಯಕ್ರಮಕ್ಕೆ ಎಷ್ಟು ಜನ ಸೇರುತ್ತಾರೆ ಮತ್ತು ಸಂಖ್ಯೆಗೆ ಅನುಗುಣವಾಗಿ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವುದು.

3) ಕಾರ್ಯಕ್ರಮದ ಆಯೋಜಕರು ಸಂಭ್ರಮಾಚರಣೆಯಲ್ಲಿ ಮಧ್ಯಪಾನಕ್ಕೆ ಅವಕಾಶ* ಇದ್ದಲ್ಲಿ, ಅಬಕಾರಿ ಇಲಾಖೆಯ ಷರತ್ತುಗಳು ಹಾಗೂ ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವುದು ಹಾಗೂ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದಲ್ಲಿ ಬೇರೆ ಚಾಲಕರ ಏರ್ಪಾಡು ಮಾಡಿ ಕಳುಹಿಸಿಕೊಡುವುದು ಅಥವಾ ಅಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವುದು.

4) ಹೊಸ ವರ್ಷದ ಆಚರಣೆಯನ್ನು ಮಧ್ಯ ರಾತ್ರಿ 12:00 ಗಂಟೆಗೆ ಆಚರಿಸಿದ ಬಳಿಕ ರಾತ್ರಿ 1:00 ಗಂಟೆಯ ಒಳಗಾಗಿ ಎಲ್ಲಾ ರೀತಿಯ ಹೊರಾಂಗಣ ಕಾರ್ಯಕ್ರಮಗಳನ್ನು ಮುಕ್ತಾಯ ಮಾಡುವುದು.

5) ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಸೂಕ್ತ ಮತ್ತು ಸಮರ್ಪಕವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಹಾಗೂ 200 ಕ್ಕಿಂತ ಹೆಚ್ಚಿನ ಸಾರ್ವಜನಿಕರು ಸೇರುವ ಸ್ಥಳದಲ್ಲಿ, ಕಡ್ಡಾಯವಾಗಿ ಸಿಸಿ ಟಿವಿ ಗಳನ್ನು ಅಳವಡಿಸುವುದು ಮತ್ತು ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ / ಅತಿಥಿಗಳ ಹೆಸರು ಮತ್ತು ವಿವರವನ್ನು ಬರೆದುಕೊಂಡು, ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಪಡೆದುಕೊಳ್ಳತಕ್ಕದ್ದು.

6) ಕಾರ್ಯಕ್ರಮದ ಆಯೋಜಕರುಗಳು ಕಾರ್ಯಕ್ರಮದ ಆಯೋಜಿಸಿದ ಸ್ಥಳದಲ್ಲಿ ಒಳ ಬರುವ ಮತ್ತು ಹೊರ ಹೋಗುವ ದ್ವಾರದಲ್ಲಿ ತಮ್ಮ ಸಿಬ್ಬಂಧಿಗಳನ್ನು ನೇಮಿಸಿಕೊಂಡು, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ನಿಗಾವಹಿಸುವುದು.

7) ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಆಧ್ಯತೆ ನೀಡಿ, ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಎಚ್ಚರದಿಂದಿರುವುದು. ಯಾವುದೇ ಸಣ್ಣ ಪುಟ್ಟ ಘಟನೆಗಳು ಜರುಗಿದಾಗ, ಯಾವುದೇ ನಿರ್ಲಕ್ಷತನ ತೋರದೇ ಕೂಡಲೇ 112 ತುರ್ತು ಸಹಾಯವಾಣಿಗೆ ಕರೆ ಮಾಡುವುದು.

8) ಕಾರ್ಯಕ್ರಮದಲ್ಲಿ ಅಳವಡಿಸುವ ದ್ವನಿವರ್ಧಕ, ಪಟಾಕಿ ಸಿಡಿಸುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ / ತೊಂದರೆಯಾಗದ ರೀತಿ ನೋಡಿಕೊಳ್ಳುವುದು ಹಾಗೂ ಕಾರ್ಯಕ್ರಮ ಆಯೋಜನೆಯ ಸ್ಥಳದಲ್ಲಿ ಈಜುಕೊಳ ಇದ್ದಲ್ಲಿ, ಹೆಚ್ಚಿನ ಗಮನ ಹರಿಸುವುದು ಹಾಗೂ ಈಜು ಕೊಳಕ್ಕೆ ಸಾರ್ವಜನಿಕರಿಗೆ ಅವಕಾಶವಿದ್ದಲ್ಲಿ ನುರಿತ ಈಜು ತಜ್ಞರನ್ನು ನೇಮಕ ಮಾಡಿಕೊಂಡು, ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು.

ಈ ರೀತಿ ಸಭೆಯಲ್ಲಿದ್ದ ಕಾರ್ಯಕ್ರಮ ಆಯೋಜಕರಿಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ ಕಾರ್ಯಪ್ಪ, ಡಿವೈಎಸ್ಪಿ ಬಾಬು ಆಂಜನಪ್ಪ, ಸುರೇಶ್, ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Vijay Kumar
PublicNext

PublicNext

26/12/2024 08:39 pm

Cinque Terre

17.3 K

Cinque Terre

0

ಸಂಬಂಧಿತ ಸುದ್ದಿ