ಶಿವಮೊಗ್ಗ: ರಸ್ತೆ ನಿರ್ಮಾಣದ ನೆಪದಲ್ಲಿ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು ಕಡಿಯಲಾಗಿದ್ದು ಆರೋಪಿಗಳ ವಿರುದ್ಧ ಸಿರಿಗೆರೆ ವಲಯ ಅರಣ್ಯಾಧಿಕಾರಿಗಳು ದೂರು ದಾಖಲಿಸಿದ್ದಾರೆ.
ಸಿರಿಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ಹಾರೋಹಿತ್ತಲು ಗ್ರಾಮದ ಸರ್ವೇ ನಂ 7ರಲ್ಲಿ ವನ್ಯಜೀವಿ ಅಭಯಾರಣ್ಯ ಪ್ರದೇಶದ ಮತ್ತಲಿಜಡ್ಡು ಗ್ರಾಮದ ಬಳಿ ಸಂಪರ್ಕ ರಸ್ತೆ ನಿರ್ಮಾಣ ನಡೆದಿದೆ. ಅಡ್ಡೇರಿಯಿಂದ ಮಚಲಿಜಡ್ಡು ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗದಲ್ಲಿದ್ದ ಸುಮಾರು 17 ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದ್ದು, ಈ ಸಂಬಂಧ ನಾಲ್ವರ ವಿರುದ್ದ ಕೇಸ್ ದಾಖಲಿಸಿರುವುದಾಗಿ ಆರ್.ಎಫ್.ಓ ಅರವಿಂದ್ ತಿಳಿಸಿದ್ದಾರೆ.
PublicNext
25/12/2024 10:57 am