ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : 'ರಾಜ್ಯದ ಇತಿಹಾಸದಲ್ಲಿಯೇ ಪವಿತ್ರವಾದ ಸಭಾಪತಿ ಪೀಠಕ್ಕೆ ಅಗೌರವ' - ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ : ರಾಜ್ಯದ ಇತಿಹಾಸದಲ್ಲಿಯೇ ಪವಿತ್ರವಾದ ಸಭಾಪತಿ ಪೀಠಕ್ಕೆ ಅಗೌರವವಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮಂತ್ರಿ ಸಿ.ಟಿ. ರವಿರವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗೂಂಡಾ ವರ್ತನೆ ತೋರಿದ್ದಾರೆ.

ರಾತ್ರೋರಾತ್ರಿಯೇ ಬಂಧಿಸಿ 5 ಜಿಲ್ಲೆಗಳಲ್ಲಿ ಸುತ್ತಿಸಿದ್ದಾರೆ, ಗಾಯ ಮಾಡಿದ್ದಾರೆ, ಇದೇನು ಪೊಲೀಸ್ ಗುಂಡಾ ರಾಜ್ಯವೇ ಇದೇ ಮೊದಲ ಬಾರಿಗೆ ಸಭಾಪತಿ ಪೀಠಕ್ಕೆ ಅವಮಾನ ಮಾಡಲಾಗಿದೆ. ಸದನದ ಒಳಗೆ ಏನೇ ನಡೆದರೂ ಅಥವಾ ಯಾರನ್ನೂ ಬಂಧಿಸಬೇಕಾದರೂ ಸಭಾಪತಿಗಳ ಒಪ್ಪಿಗೆ ಬೇಕಾಗುತ್ತದೆ. ಅವರ ಗಮನಕ್ಕೆ ಬಾರದೆ ಈ ರೀತಿ ಸಿ.ಟಿ.ರವಿಯವರನ್ನು ಬಂಧಿಸಿರುವುದು ಖಂಡನೀಯ ಎಂದಿದ್ದಾರೆ.

ಸಭಾಪತಿ ಹೊರಟ್ಟಿಯವರು ಮತ್ತು ಸರ್ಕಾರ ಈ ಬಗ್ಗೆ ಸ್ಪಷ್ಟನೇ ನೀಡಬೇಕಾಗಿದೆ. ಅವರು ತಮ್ಮ ಜವಾಬ್ದಾರಿಯಿಂದ ನಿರ್ವಹಿಸಬೇಕು, ಹೀಗೆ ಗೂಂಡಾ ವರ್ತನೆ ತೋರಿಸಿರುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಮಂತ್ರಿ, ತಮಗೆ ಮನಸ್ಸಿಗೆ ಬಂದಿದ್ದನ್ನು ಹೇಳುತ್ತಿದ್ದಾರೆ. ಹೈಕೋರ್ಟ್ ಈಗಾಗಲೇ ಸರ್ಕಾರಕ್ಕೆ ರವಿಯವರಿಗೆ ಮಧ್ಯಂತರ ಜಾಮೀನು ನೀಡುವ ಮೂಲಕ ಕಪಾಳ ಮೋಕ್ಷ ಮಾಡಿದೆ.

ಇಡೀ ರಾಜ್ಯದಲ್ಲಿ ಪೊಲೀಸರು ಸರ್ಕಾರದ ಗುಲಾಮರಂತೆ ವರ್ತಿಸುತ್ತಿದ್ದಾರೆ. ಆಡಳಿತ ಸರ್ಕಾರದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಶಿವಮೊಗ್ಗದಲ್ಲೂ ಕೂಡ ಮುಂದುವರೆದಿದೆ. ರಾಷ್ಟ್ರಭಕ್ತ ಬಳಗದ ವಿಶ್ವಾಸ್ ಎಂಬುವವರು ರೈಲ್ವೆ ಬ್ರಿಡ್ಜ್ ಹತ್ತಿರ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದರೆ ಅವರ ವಿರುದ್ಧ ಕೇಸ್ ಹಾಕಲಾಗಿದೆ.

ಇದು ಯಾವ ನ್ಯಾಯ, ಈ ಹಿಂದೆ ನನ್ನ ಬಗ್ಗೆಯೂ ಎರಡು ಬಾರಿ ಕೇಸ್ ಹಾಕಲಾಗಿದೆ. ಬಾಂಗ್ಲಾ ದೇಶದ ಮುಸ್ಲಿಂರಿಗೆ ಬೈದರೆ ಶಿವಮೊಗ್ಗದ ಎಸ್.ಪಿ.ಯವರಿಗೆ ಏಕೆ ಸಿಟ್ಟು, ಅವರೇಕೆ ಸರ್ಕಾರದ ಗುಲಾಮರಂತೆ ವರ್ತಿಸುತ್ತಿದ್ದಾರೆ. ಅವರ ಹಿಂದೆ ಯಾವ ರಾಜಕಾರಣಿಗಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿ.ಟಿ.ರವಿ ಬಂಧನ ಮತ್ತು ಅನಂತರ ಅವರನ್ನು ನಡೆಸಿಕೊಂಡ ರೀತಿ ಬಗ್ಗೆ ಮತ್ತು ಆಕಸ್ಮಾತ್ ಸಿ.ಟಿ.ರವಿಯವರು ಸಚಿವೆ ಲಕ್ಷ್ಮೀಹೆಬ್ಬಾಳಕರ್‍ರವರಿಗೆ ಅವಾಚ್ಯ ಶಬ್ಧ ಪ್ರಯೋಗಿಸಿದ್ದರೆ ಈ ಎರಡು ಘಟನೆಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.

Edited By : Manjunath H D
PublicNext

PublicNext

23/12/2024 05:42 pm

Cinque Terre

34.86 K

Cinque Terre

0

ಸಂಬಂಧಿತ ಸುದ್ದಿ