ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಲವಾದಿ ನಾರಾಯಣಸ್ವಾಮಿ ವಿರುದ್ಧ ಸಿಡಿದೆದ್ದ ಕೊರಚ-ಕೊರಮ ಸಮುದಾಯ

ಚಲವಾದಿ ನಾರಾಯಣಸ್ವಾಮಿ ವಿರುದ್ಧ ಸಿಡಿದೆದ್ದ ಕೊರಚ-ಕೊರಮ ಸಮುದಾಯ

ಶಿವಮೊಗ್ಗ : ಪರಿಶಿಷ್ಟ ಜಾತಿ ಅಲೆಮಾರಿ ಪಟ್ಟಿಯಲ್ಲಿರುವ ಅಧಿಕೃತ ಪಟ್ಟಿಯಿಂದ ಕೊರಚ-ಕೊರಮ ಸಮುದಾಯವನ್ನು ಹೊರಗಿಡುವಂತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ವಿರೋಧಿಸಿ ಡಿ.30 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಕೊರಚರ ಮಹಾಸಂಘದ ಗೌರವಾಧ್ಯಕ್ಷ ಕೆ.ಎನ್.ಪ್ರಭು ತಿಳಿಸಿದರು.

ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು ಕಳೆದ 18 ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಅನಧಿಕೃತ ಸ್ವಯಂಪ್ರೇರಿತ ತತಕ್ಷಣಕ್ಕೆ 49 ಸಮುದಾಯಗಳ ಸಂಘಟನೆಗಳ ಹೆಸರಿನಲ್ಲಿ ಸುವರ್ಣಸೌಧದ ಹೊರಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಿದ ಕೆಲವು ಪುಡಿ ನಾಯಕರು ಅಲೆಮಾರಿ ಸಮುದಾಯಗಳಲ್ಲಿ ಒಡಕು ತರುವಂತಹ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಛಲವಾದಿ ನಾರಾಯಣಸ್ವಾಮಿ ಅವರು ಅಲೆಮಾರಿ ಸಮುದಾಯಗಳ ಕುರಿತು ಇದುವರೆಗೂ ಎಲ್ಲೂ ಧ್ವನಿ ಎತ್ತದ ಅವರು ಅಧಿಕೃತವಾಗಿ ಅಲೆಮಾರಿ ಪಟ್ಟಿಯಲ್ಲಿರುವ ಕೊರಚ- ಕೊರಮ

ಸಮುದಾಯ ಒಳ ಮೀಸಲಾತಿ ಪಟ್ಟಿಗೆ ಸೇರಿರುವುದಿಲ್ಲ ಎಂಬ ಹೇಳಿಕೆ ನೀಡಿರುವುದು ಖಂಡನೀಯ ಎಂದರು. ಪರಿಶಿಷ್ಟ ಜಾತಿಯ 51 ಜಾತಿಗಳನ್ನು ಒಳಗೊಂಡಂತೆ ಅಲೆಮಾರಿ ನಿಗಮ ಸ್ಥಾಪನೆ ಮಾಡಿರುವುದು ಬಿಜೆಪಿ ಸರ್ಕಾರ. ಅಲೆಮಾರಿಗಳು ಅಮಾಯಕರು, ಅವಿದ್ಯಾವಂತರು ಎಂದು ತಿಳಿದು ಸಣ್ಣ ಸಣ್ಣ ಸೂಕ್ಷ್ಮ ಸಮುದಾಯಗಳನ್ನು ಎತ್ತಿಕಟ್ಟಿ ಜಗಳ ತಂದಿಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬೈಟ್ : ಕೆ.ಎನ್.ಪ್ರಭು, ಶಿವಮೊಗ್ಗ ಜಿಲ್ಲಾ ಕೊರಚರ ಮಹಾಸಂಘದ ಗೌರವಾಧ್ಯಕ್ಷ

Edited By : PublicNext Desk
Kshetra Samachara

Kshetra Samachara

28/12/2024 03:29 pm

Cinque Terre

1.1 K

Cinque Terre

0

ಸಂಬಂಧಿತ ಸುದ್ದಿ