ಶಿವಮೊಗ್ಗ : ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರು ಆರ್ಥಿಕ ಶಸ್ತಿನ ಮಹಾಮೇಧಾವಿ, ಅವರೊಬ್ಬ ಶ್ರೇಷ್ಟನಾಯಕರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು. ಮಾಜಿ ಪ್ರಧಾನಿ ಅವರಿಗೆ ತಮ್ಮ ಅಶ್ರುತರ್ಪಣ ಸಲ್ಲಿಸಿ ದೇಶ ಕಂಡ ಅತ್ಯಂತ ಮುತ್ಸದ್ಧಿ ರಾಜಕಾರಣಿ ಮನಮೋಹನ್‌ಸಿಂಗ್ ಅವರ ನಿಧನಕ್ಕೆ ಇಡೀ ದೇಶ ತಮ್ಮ ಭಾವನೆಗಳನ್ನು ಪ್ರಕಟಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಜನಪರವಾದ ಮತ್ತು ಆರ್ಥಿಕ ಪರವಾದ ಅನೇಕ ಸಂಗತಿಗಳನ್ನು ಜೋಡಿಸಿ ದೇಶದ ಅಭಿವೃದ್ಧಿಗಾಗಿ ಕಾರ್ಯಮಾಡಿದವರು ಅವರ ನಿಧನ ನನ್ನ ಮನಸ್ಸಿಗೆ ತುಂಬ ನೋವು ತಂದಿದೆ. ಆಗೆಯೇ ಅವರ ಕುಟುಂಬಕ್ಕೆ ತುಂಬ ನೋವಾಗಿದೆ. ದುಃಖವನ್ನು ತಡೆದುಕೊಳ್ಳುವ ಶಕ್ತಿ ಆ ಕುಟುಂಬಕ್ಕೆ ಬರಲಿ ಎಂದರು.
ಮನಮೋಹನ್‌ಸಿಂಗ್ ತುಂಬಾ ಮೌನಿಯಾಗಿದ್ದರು, ಅವರು ಜೋರಾಗಿ ಮಾತನಾಡಿದ್ದನ್ನು ನಾವು ಕೇಳಿಯೇ ಇಲ್ಲ, ರಾಷ್ಟ್ರ ಆರ್ಥಿಕ ಆಪತ್ತಿಗೆ ಒಳಗಾದಗೆಲ್ಲ, ಅದನ್ನು ಪಾರು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದಿರಾಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್‌ನ ನಾಯಕರಿಗೆ ಮಾರ್ಗದರ್ಶನ ಕೂಡ ಮಾಡಿದ್ದರು. ಅವರಿಗೆ ನಮ್ಮ ಕಂಬನಿ ಎಂದರು.
ಹಾಗೆಯೇ ಕರ್ನಾಟಕದ ಮೂರು ಯೋಧರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಬಲಿಕೊಟ್ಟಿದ್ದಾರೆ. ಕರ್ನಾಟಕವು ಯೋಧರನ್ನು ಹೊಂದಿದ ದೇಶವಾಗಿದೆ. ಇವರ ದೇಶ ಪ್ರೇಮ ಅಜರಾಮರವಾಗಿದ್ದು, ಈ ಮೂರು ಜನ ಯೋಧರಿಗೂ ಕೂಡ ನಮ್ಮ ಶ್ರದ್ಧಾಂಜಲಿ ಎಂದರು.
PublicNext
27/12/2024 05:50 pm