ಬೆಂಗಳೂರು : ರಾಜ್ಯದಲ್ಲೇ ಮೊದಲ ಬಾರಿ ಸ್ಥಳೀಯ ಸಂಸ್ಥೆಯಿಂದ ಮೆಡಿಕಲ್ ಕಾಲೇಜ್ ನಿರ್ಮಾಣವಾಗುತ್ತಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ವತಿಯಿಂದ ತಲೆ ಎತ್ತಲ್ಲಿದೆ ವೈದ್ಯಕೀಯ ಮಹಾವಿದ್ಯಾಲಯ.
ಎಸ್, 2024 - 25 ಬಜೆಟ್ ನಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಪ್ರಸ್ತಾವನೆ ನೀಡಲಾಗಿತ್ತು. ಇಲ್ಲಿಯವರೆಗೂ ಪಾಲಿಕೆ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳನ್ನೂ ನಡೆಸಲಾಗುತ್ತಿತ್ತು, ಆದ್ರೆ ಈ ಬಾರಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ.
ಬಜೆಟ್ ನಲ್ಲಿ ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ 500 ಕೋಟಿ ಮೀಸಲಿಟ್ಟಿದ್ದು , ಗೋವಿಂದರಾಜ ನಗರದ ಎಂ ಸಿ ಲೇಔಟ್ ನಲ್ಲಿರೋ ಪಾಲಿಕೆ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಸರ್ಕಾರಕ್ಕೆ ಪಾಲಿಕೆಯಿಂದ ಪ್ರಸ್ತಾವನೆ ಕೂಡ ಸಲ್ಲಿಕೆ ಮಾಡಲಾಗಿದೆ.
ವೈದ್ಯಕೀಯ ನಿಯಮದಂತೆ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ 500 ಬೆಡ್ ಗಳು ಇರಬೇಕು, ಈಗಾಗಲೇ ಎಂ ಸಿ ಲೇಔಟ್ ಪಾಲಿಕೆ ಆಸ್ಪತ್ರೆಯಲ್ಲಿ 300 ಬೇಡ್ ಗಳಿದ್ದು, ಇದನ್ನೇ ಹೈಟೆಕ್ ಸ್ಪರ್ಶ ನೀಟ್ ಮತ್ತಷ್ಟು ಬೆಡ್‌ಗಳನ್ನು ಹೆಚ್ಚಿಸಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಬಿಬಿಎಂಪಿ ಮುಂದಾಗಿದೆ. ಅಂದುಕೊಂಡಂತೆ ಬಜೆಟ್ ನಲ್ಲಿ ಅನುದಾನ ನೀಡಿದ್ರೆ ಮುಂದಿನ ವರ್ಷ ಬಿಬಿಎಂಪಿಯಿಂದ ವೈದ್ಯಕೀಯ ಮಹಾವಿದ್ಯಾಲಯ ಓಪನ್ ಆಗಲಿದೆ.
PublicNext
26/12/2024 11:20 am