ಬೆಂಗಳೂರು : ನನಗೂ ಇಬ್ಬರು ಹೆಣ್ಣುಮಕ್ಕಳು, ನಾಲ್ಕು ಮೊಮ್ಮಕ್ಕಳು ಇದ್ದಾರೆ. ನನ್ನ ಮೇಲೆ ಸುಳ್ಳು ರೇಪ್ ಕೇಸ್ ಕೊಡೋದಕ್ಕೆ ಹೋಗಬೇಡಿ, ರೇಪ್ ಕೇಸ್ ಕೊಟ್ಟಿರೋರು ನಿಮಗೆ ಗೊತ್ತಿಲ್ಲ, ಸುಳ್ಳಿಲ್ಲ ಇದರಲ್ಲಿ ನಾನು ಶಾಮೀಲಾಗಿಲ್ಲ ಅಂದ್ರೆ ಬನ್ನಿ ಕಾಲ ಭೈರವೇಶ್ವರನ ಸನ್ನಿಧಿಗೆ ಬನ್ನಿ ಪ್ರಮಾಣ ಮಾಡೋಣ ಎಂದು ಕುಸುಮ ಹನುಮಂತರಾಯಪ್ಪರಿಗೆ ಮುನಿರತ್ನ ಆಹ್ವಾನಿಸಿದ್ದಾರೆ.
ಈ ಕುರಿತಂತೆ ತಮ್ಮ ಮಲ್ಲೇಶ್ವರಂ ನಿವಾಸದಲ್ಲಿ ಮಾತನಾಡಿದ ಅವರು, ಕಾಲಭೈರವೇಶ್ವರನ ಸನ್ನಿಧಿಗೆ ನಾನು ಬರ್ತಿನಿ ನೀವು ಮತ್ತು ನಿಮ್ಮ ತಂದೆ ಬಂದು ಆಣೆ ಮಾಡಿ, ರೇಪ್ ಕೇಸ್ ಕೊಟ್ಟಿರೋರು ನನಗೆ ಗೊತ್ತಿಲ್ಲ ಎಂದು ಪ್ರಮಾಣ ಮಾಡಿ ನೋಡೋಣ, ನಾನು ಪ್ರಮಾಣ ಮಾಡಲು ಸಿದ್ಧನಾಗಿದ್ದೇನೆ. ನನ್ನ ಮೇಲೆ ಕೊಟ್ಟಿರುವ ರೇಪ್ ಕೇಸ್ ಸುಳ್ಳು ಎಂದು ಪ್ರಮಾಣ ಮಾಡ್ತೀನಿ. ಇಲ್ಲ ನೀವು ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ. ನ್ಯಾಯಾಲಯ ಶಿಕ್ಷೆ ಕೊಟ್ಟರೆ ನಾನು ಗೌರವಯುತವಾಗಿ ಒಪ್ಪಿಕೊಳ್ಳುತ್ತೇನೆ. ನಿಮ್ಮ ಸಂತೋಷಕ್ಕೆ ನನ್ನ ಮೇಲೆ ಸುಳ್ಳು ದೂರು ಕೊಡಬೇಡಿ ಎಂದರು. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲವೂ ದಾಖಲೆ ಇದೆ. ನಾಳೆ 9 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ವಿವರಿಸುತ್ತೇನೆ ಎಂದಿದ್ದಾರೆ.
PublicNext
27/12/2024 05:18 pm