ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಕಾಂಗ್ರೆಸ್ ನಿಂದಲೇ ಡಾ.ಬಿ.ಆರ್. ಅಂಬೇಡ್ಕರ್ ಗೆ ಅವಮಾನ- ಸಂಸದ ಕಾರಜೋಳ

ಚಿತ್ರದುರ್ಗ: ಲೋಕಸಭೆಯಲ್ಲಿ‌ ಕೇಂದ್ರ ಗೃಹಸಚಿವ ಅಮಿತ್ ಶಾ ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ನಾಯಕರ‌ ವಿರುದ್ಧ ಸಂಸದ ಗೋವಿಂದ ಕಾರಜೋಳ‌ ಗರಂ ಆಗಿದ್ದಾರೆ.

ಚಿತ್ರದುರ್ಗ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂಬೇಡ್ಕರ್ ರವರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್. ಪಂಡಿತ್ ಜವಾಹರಲಾಲ್ ನೆಹರು ಎರಡು ಬಾರಿ‌ ಅಂಬೇಡ್ಕರ್ ರನ್ನು ಚುನಾವಣೆಯಲ್ಲಿ ಸೋಲಿಸಿದ್ರು. ಅಂಬೇಡ್ಕರ್ ಶವ ಸಂಸ್ಕಾರ ಮಾಡಲು ಮೂರಡಿ-ಆರಡಿ ಜಾಗೆ ನೀಡಲಿಲ್ಲ. ಅಂಬೇಡ್ಕರ್ ರವರ ಶವ ಸಾಗಿಸಲು 5 ಸಾವಿರ ರೂ. ವಿಮಾನ ಚಾರ್ಜ್ ಕೂಡ ನೀಡಲಿಲ್ಲ. ಆದ್ರೆ, ಕಾಂಗ್ರೆಸ್ ನಾಯಕರ ಸಮಾಧಿಗಳು ಮಾತ್ರ ನೂರಾರು ಎಕರೆ ಜಾಗದಲ್ಲಿ ಮಾಡಿದ್ರು.

ಅದೇನು ಕಾಂಗ್ರೆಸ್ಸಿಗರ ಆಸ್ತಿಯೇ? ಹಾಗಾಗಿ ಕಾಂಗ್ರೆಸ್ಸಿಗರು ಇತಿಹಾಸದುದ್ದಕ್ಕೂ ಅಂಬೇಡ್ಕರ್ ರಿಗೆ ಅವಮಾನ‌ ಮಾಡಿ, ಈಗ ಅಂಬೇಡ್ಕರ್ ಜಪ ಮಾಡ್ತೀರಲ್ಲ ನಾಚಿಕೆಯಾಗಲ್ವ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ಮುಖಕ್ಕೆ‌ ಹೊಡೆದಂತೆ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ವ್ಯಂಗ್ಯವಾಡಿದ್ದೇ ಹೊರತು, ಅಂಬೇಡ್ಕರ್ ರವರಿಗೆ ಅಲ್ಲ ಅಂತಾ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ.

Edited By : Vinayak Patil
PublicNext

PublicNext

25/12/2024 10:35 pm

Cinque Terre

26.08 K

Cinque Terre

0

ಸಂಬಂಧಿತ ಸುದ್ದಿ