ಮಡಿಕೇರಿ: ಮೈಸೂರಿನ ಪ್ರಿನ್ಸಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವುದಕ್ಕೆ ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತ ಪಡಿಸಿದ್ದಾರೆ.
ಇದೀಗ ಮೈಸೂರಿನ ಪ್ರಿನ್ಸಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯನವರ ಹೆಸರಿಡು ವಿಚಾರಕ್ಕೆ ಸಂಬಂದಿಸಿದಂತೆ ರಾಜಕೀಯ ಬೆಳವಳಿಗೆಗಳು ಹೆಚ್ಚಾಗಿ ನಡೆಯುತ್ತಿದ್ದು ಸಿದ್ದರಾಮಯ್ಯನವರ ಹೆಸರಿಡುವುದಕ್ಕೆ ಸಂಸದ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಿನ್ಸಸ್ ಹೆಸರು ಆ ರಸ್ತೆಗೆ ಸುಮ್ಮನೇ ಬಂದಿರುವುದಲ್ಲ ಅದು ಕೆಆರ್ ಎಸ್ ಗೆ ಸಂಪರ್ಕ ಕಲ್ಪಿಸುತ್ತದೆ ಹೀಗಾಗಿ ಕೆಆರ್ ಎಸ್ ರಸ್ತೆ ಅಂತ ಜನರು ಸಾಮಾನ್ಯವಾಗಿ ಕರೆಯುತ್ತಾರೆ. ಆದರೆ ಮಹಾರಾಣಿ ಕೃಷ್ಣಾಜಮ್ಮಣ್ಣಿಯವರ ನೆನಪಿಗೋಸ್ಕರ ಅವರ ಕುಟುಂಬ ಈ ಹೆಸರಿಟ್ಟಿತ್ತು ಕೃಷ್ಣಾಜಮ್ಮಣ್ಣಿಯವರು ಕ್ಷಯರೋಗದಿಂದ ಮೃತಪಟ್ಟರು ಅದರ ಅಧ್ಯಯನಕ್ಕಾಗಿ ಕ್ಷಯ ರೋಗ ಆಸ್ಪತ್ರೆಯನ್ನು ಮಾಡಲಾಯಿತು
ಹೀಗಾಗಿ ಅವರ ಹೆಸರನ್ನು ಆ ರಸ್ತೆಗೆ ನಾಮಕರಣ ಮಾಡಲಾಗಿದೆ ಅಲ್ಲಿ ಕೃಷ್ಣಾಜಮ್ಮಣ್ಣಿ ಸ್ಯಾನಿಟೋರಿಯಂ ಶುರು ಮಾಡಲಾಗಿತ್ತು. ಆದರೆ ಈಗ ಸಿದ್ದರಾಮಯ್ಯನವರ ಹೆಸರು ಇಡುವ ಬೆಳವಣಿಗೆ ಬೇಸರ ಎನಿಸುತ್ತದೆ ಮೈಸೂರು ಅರಸರ ಅಭಿವೃದ್ಧಿ ಕೆಲಸಗಳಿಂದ ಹಳೇ ಮೈಸೂರು ಭಾಗ ಅಭಿವೃದ್ಧಿಯಾಗಿದೆ ಆದರೆ ಆಧುನಿಕ ಕಾಲದ ಜನಪ್ರತಿನಿಧಿಗಳು ನಾವು ಜನರಿಂದ ಆಯ್ಕೆಯಾಗಿ ಬರುವ ನಮ್ಮಗಳ ಹೆಸರನ್ನು ಇಡುವುದು ಸರಿಯಲ್ಲ ನಿಮ್ಮ ಹೆಸರು ಇಡಬೇಕೆಂದಿದ್ದರೆ ಬೇರೆ ಸಾಕಷ್ಟು ರಸ್ತೆಗಳಿವೆ. ಅವುಗಳಿಗೆ ನಿಮ್ಮ ಹೆಸರಿಟ್ಟುಕೊಳ್ಳಿ ಎಂದು ಸಂಸದ ಯದುವೀರ್ ಒಡೆಯರ್ ಮಡಿಕೇರಿಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ರು.
PublicNext
25/12/2024 03:52 pm