ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ : ಅರ್ಥಪೂರ್ಣವಾಗಿ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆ

ಮಡಿಕೇರಿ: ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆಯ ಅಂಗವಾಗಿ ಕೊಡಗಿನಲ್ಲೂ ಸುಶಾಸನ್ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಮಡಿಕೇರಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಕೊಡಗು ಮೈಸೂರು ಲೋಕ ಸಭಾ ಸದಸ್ಯರಾದ ಯದೂವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮಕ್ಕೆ ಪುಶ್ಪರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ರು.

ಬಳಿಕ ಮಾತನಾಡಿದ ಒಡೆಯರ್ ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ದೊಡ್ಡ ಪಕ್ಷವಾಗಿದೆ ಅದಕ್ಕೆ ಕಾರ್ಯಕರ್ತರು ಹಾಗೂ ನಾಯಕರುಗಳ ಪರಿಶ್ರಮ ಬಹಳ ಮುಖ್ಯವಾಗಿದೆ.‌ಅಂತಹವರಿಂದಲೆ ಬಿಜೆಪಿ ಇಷ್ಟು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿ ಅವರು ಈ ಪಕ್ಷಕ್ಕೆ ಬಹಳ ದುಡಿದಿದ್ದಾರೆ. ಅವರ ಪರಿಶ್ರಮ‌ ಕೂಡ ಬಹಳಷ್ಟಿದೆ. ಪಕ್ಷಕ್ಕೆ ಮಾತ್ರವಲ್ಲ ದೇಶಕ್ಕೂ ಅವರ ಕೊಡುಗೆ ಅಪರಾವಾಗಿದೆ. ಸೇನೆಯ ವಿಚಾರದಲ್ಲಾಗಿರ ಬಹುದು ಭದ್ರತೆ ಹಿಗೆ ನಾನಾ ವಿಚಾರದಲ್ಲೂ ಉತ್ತಮ ನಾಯಕನಾಗಿ ಪಕ್ಷವನ್ನ ಮುನ್ನಡೆಸಿದ್ದಾರೆ ಇಂದು ಅವರ 100ನೇ ಹುಟ್ಟು ಹಬ್ಬ ಇಂದು ಅವರನ್ನ ನಾವೇಲ್ಲರು ಸ್ಮರಿಸಬೇಕೆಂದು ಕರೆಕೊಟ್ಟರು.

Edited By : PublicNext Desk
PublicNext

PublicNext

25/12/2024 03:18 pm

Cinque Terre

15.87 K

Cinque Terre

0

ಸಂಬಂಧಿತ ಸುದ್ದಿ