ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ - ಹೋಮ್ ಮಿನಿಸ್ಟರ್ ರಿಯಾಕ್ಸನ್

ಬೆಳಗಾವಿ: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆಯಿಂದ ದಾಳಿ ಮಾಡಿದ ಪ್ರಕರಣದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಯುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರತಿಕ್ರಿಯೆ ನೀಡಿದರು.

ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ತಾನೆ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಹಾಕಿದ್ದಾರೆಂಬ ಮಾಹಿತಿ ಸಿಕ್ಕಿದೆ. ಬೆಂಗಳೂರಿನ ಅವರ ಪಕ್ಷದ ಸಭೆ ಮುಗಿಸಿ ಹೋಗುವಾಗ ಘಟನೆ ನಡೆದಿದೆ. ಘಟನೆ ಕುರಿತು ಬೆಂಗಳೂರು ಕಮಿಷನರ್ ಮೂಲಕ ಹೆಚ್ಚಿನ ಮಾಹಿತಿ ತೆಗೆದುಕೊಳ್ಳುವೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ, ವಿಚಾರಣೆ ನಡೆಯುತ್ತಿದೆ. ಮುನಿರತ್ನ ಮೇಲೆ ಯಾರು, ಏಕೆ ದಾಳಿ ಮಾಡಿದ್ದಾರೆ ಗೊತ್ತಿಲ್ಲ. ತನಿಖೆ ಮಾಡ್ತಿದ್ದೇವೆ, ಸತ್ಯಾಂಶ ಬಗ್ಗೆ ನಂತರ ವಿವರಣೆ ನಿಡ್ತೀನಿ ಎಂದರು.‌

ಡಿಕೆ ಬ್ರದರ್ಸ್ ವಿರುದ್ಧ ಕೊಲೆ ಆರೋಪ ವಿಚಾರವಾಗಿ ಮಾತನಾಡಿದ ಅವರು, ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಹಲ್ಲೆಗೆ ಸಮೀತವಾಗಿ ಮಾಹಿತಿ ನೀಡಿದ್ದೇನೆ, ತನಿಖೆ ಮಾಡ್ತಿನಿ ಎಂದರು.

Edited By : Manjunath H D
PublicNext

PublicNext

25/12/2024 02:40 pm

Cinque Terre

28.58 K

Cinque Terre

0

ಸಂಬಂಧಿತ ಸುದ್ದಿ