ಅಥಣಿ: ಅಥಣಿ ತಾಲೂಕಿನಲ್ಲಿ ಬಿತ್ತನೆಯಾದ ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಗೋಧಿ ಬೆಳೆಗಳಿಗೆ ರಸಹಿರುವ ಕೀಟಗಳ ಕಾಟ ಕಾಟ ಹೆಚ್ಚಾಗಿ ಕಂಡು ಬಂದ ಹಿನ್ನೆಲೆ ಬೆಳೆಗಳು ಹನಿಯಾಗಿವೆ. ಈ ಕುರಿತು ಪಬ್ಲಿಕ್ ನೆಕ್ಸ್ಟ್ ನಲ್ಲಿ ಕಳೆದ ಎರಡು ದಿನಗಳ ಹಿಂದೆ ವರದಿ ಪ್ರಸಾರವಾಗಿತ್ತು. ವರದಿ ಬಳಿಕ ಬೆಳೆ ವೀಕ್ಷಣೆಗೆ ಆಗಮಿಸಿದ ಕೃಷಿ ಅಧಿಕಾರಿಗಳ ತಂಡ ರೋಗ ನಿವಾರಣೆ ಕುರಿತು ರೈತರಿಗೆ ಸಲಹೆ ನೀಡಿದರು.
ನೂರಾರು ಎಕರೆ ಬೆಳೆ ಹಾನಿಯಾಗಿರುವ ಕುರಿತು ಪರಿಶೀಲನೆ ಮಾಡಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕ ನಿಂಗಣ್ಣ ಬಿರಾದಾರ ರೈತರಿಗೆ ರೋಗ ನಿವಾರಣೆ ಕುರಿತು ಹಲವು ಸಲಹೆ ಸೂಚನೆ ನೀಡಿದರು. ಈ ಕೀಟಬಾದೆಗೆ ಮೂಲ ಕಾರಣ ವಾತಾವರಣ ಬದಲಾವಣೆ ಹಾಗೂ ಅಸಹಜ ಕೃಷಿ (ಕೃಷಿ ಪದ್ಧತಿಯಲ್ಲಿ ಬದಲಾವಣೆ) ಕಳೆದ ನಾಲ್ಕು ದಿನಗಳಿಂದ ಅತಿ ಹೆಚ್ಚಾಗಿ ಕಂಡುಬಂದ ಮಂಜು ಹಾಗೂ ಮೋಡ ಮುಸುಕಿದ ವಾತಾವರಣದಿಂದ ರೋಗಬಾದೆ ಹೆಚ್ಚಾಗಿ ಕಾಡುತ್ತಿದೆ. ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುವ ಹಿಮಿಡಾ ಕೋಪಿಡ್, ಪ್ರತಿ ಲೀಟರ್ ಗೆ. 5 ml ಅಥವಾ ಪಿಪ್ರೂನಿಲ್ ಕೆಮಿಕಲ್ ಪ್ರತಿ ಲೀಟರ್ ನೀರಿಗೆ 1 ml ಇವುಗಳ ಜೊತೆ 30,045 ನೀರಿನಲ್ಲಿ ಕರಗುವ ರಸಗೊಬ್ಬರ 1 ಗ್ರಾಂ ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡನೆ ಮಾಡುವಂತೆ ಸಲಹೆ ನೀಡಿದರು. ಬೆಳೆ ಹಾನಿಯಾಗಿರುವ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.
PublicNext
25/12/2024 12:00 pm