ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕಾಫಿನಾಡಿನಲ್ಲೊಬ್ಬ ವಾಮಾಚಾರದ ಪಿಡಿಓ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ವಾಮಾಚಾರ ಬೆದರಿಕೆಯ ಆರೋಪ ಕೇಳಿ ಬಂದಿದೆ. ತೇಗೂರು ಗ್ರಾಮ ಪಂಚಾಯಿತಿಯ ಪಿಡಿಓ ಹಣ ದುರುಪಯೋಗ ಹಾಗೂ ಅಕ್ರಮ ಇ-ಸ್ವತ್ತಿನ ಮಾಡಿದ್ದರೆಂದು ಪಂಚಾಯಿತಿಯ ಹಾಲಿ ಸದಸ್ಯ ವೇಣುಗೋಪಾಲ್ ಹಾಗೂ ಮಾಜಿ ಮಹಿಳಾ ಸದಸ್ಯೆಯ ಪತಿ ದೇವರಾಜ್ ಎಂಬುವವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಕೀರ್ತನಾ ಅವರಿಗೆ ದೂರು ನೀಡಿದ್ದರು.

ಸಿಇಓ ಅವರು ತಾಲೂಕು ಪಂಚಾಯತ್ ಇಓ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ ಪಿಡಿಓ ತನಿಖೆಗೆ ಸಹಕರಿಸದೆ ರಜೆ ಹಾಕಿ ತೆರಳಿದ್ದು ಈ ಸಂದರ್ಭದಲ್ಲಿ ದೂರು ನೀಡಿದ್ದ ವೇಣುಗೋಪಾಲ್ ಅವರಿಗೆ ವಾಮಾಚಾರದ ಫೋಟೋಗಳನ್ನು ಕಳುಹಿಸಿ ಬೇದರಿಸುತ್ತಿದ್ದಾರೆಂದು ವೇಣುಗೋಪಾಲ್ ಆರೋಪಿಸುತ್ತಿದ್ದಾರೆ.

Edited By : Suman K
Kshetra Samachara

Kshetra Samachara

23/12/2024 03:36 pm

Cinque Terre

3.78 K

Cinque Terre

0

ಸಂಬಂಧಿತ ಸುದ್ದಿ