ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನಮ್ಮನ ಕಿತ್ತೂರು: ಕೂಸಿನ ಮನೆಯ 2ನೇ ಹಂತದ ಆರೈಕೆದಾರರ ತರಬೇತಿಗೆ ಚಾಲನೆ

ಚನ್ನಮ್ಮನ ಕಿತ್ತೂರು: ಕೂಸಿನ ಮನೆಯೊಂದು ಉತ್ತಮವಾದ ಯೋಜನೆಯಾಗಿದ್ದು ಆರೈಕೆದಾರರು ಮಕ್ಕಳನ್ನು ಸೂಕ್ಷ್ಮವಾಗಿ ಜಾಗೃತಿಯಿಂದ ಗಮನ ವಿಟ್ಟು ನೋಡಿಕೊಳ್ಳಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಘೋರ್ಪಡೆ ತಿಳಿಸಿದರು.

ಇಲ್ಲಿಯ ತಾಲೂಕು ಪಂಚಾಯತ ಸಭಾ ಭವನದಲ್ಲಿ ಸೋಮವಾರ 2ನೇ ಹಂತದ ಕೂಸಿನ ಮನೆ ಆರೈಕೆದಾರರಿಗೆ 7 ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳನ್ನು ನೋಡಿಕೊಳ್ಳುವ ಕೆಲಸವು ಉತ್ತಮವಾದದ್ದು ಅದು ನಿಮಗೆ ದೊರಕಿರುವುದರಿಂದ ಆರೈಕೆದಾರರಾಗಿರುವ ನೀವು ಕೂಸಿನ ಮನೆಯ ಮಕ್ಕಳಿಗೆ ಪೋಷಕರ ಸ್ಥಾನದಲ್ಲಿ ಇದ್ದು ಮಕ್ಕಳ ಲಾಲನೆ ಪಾಲನೆ ಮಾಡುವುದು ನಿಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಹೇಳುತ್ತಾ ಮಕ್ಕಳ ಆರೈಕೆ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.

ಸಹಾಯಕ ನಿರ್ದೇಶಕ(ಗ್ರಾಉ) ಮಹಮ್ಮದ್ ಗೌಸ್ ರಿಷಲ್ದಾರ್ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಕ್ಕಳ ಆರೈಕೆ ಮಾಡುವ ಉದ್ದೇಶದಿಂದ ಸರ್ಕಾರ ಕೂಸಿನ ಮನೆ ಬರುವ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನ ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಲೆಕ್ಕಾಧಿಕಾರಿ ಈರಣ್ಣ ಕಮ್ಮಾರ, ಮಾಸ್ಟರ್ ಟ್ರೆನರ್ಸ್ ಬೇಬಿ ಕಮತಗಿ, ಚನ್ನಮ್ಮ ನಾಯಕ, ಐಇಸಿ ಸಂಯೋಜಕಿ ಎಸ್ ಬಿ ಜವಳಿ, ವಿಷಯ ನಿರ್ವಾಹಕ ಲಚ್ಚಪ್ಪ ಗೊಡಚಿ, ಡಿಟಿಸಿ ಆರತಿ ನವಲೂರು, ರೂಪ ಹುಲಮನಿ ಸೇರಿದಂತೆ ತಾಲೂಕಿನ 11 ಗ್ರಾ.ಪಂ. ಯ ಕೂಸಿನ ಮನೆ ಆರೈಕೆದಾರರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

23/12/2024 01:29 pm

Cinque Terre

7.04 K

Cinque Terre

0

ಸಂಬಂಧಿತ ಸುದ್ದಿ