ಬೆಳಗಾವಿ : ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದು ಮಾಡಿತ್ತು. ಅದರ ಬೆನ್ನಲ್ಲೆ ಈಗ ಬೆಳಗಾವಿಯಲ್ಲಿ ಮತ್ತೊಂದು ಬಾಣಂತಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಬೆಳಗಾವಿಯ ಚಳಿಗಾದ ಅಧಿವೇಶನದಲ್ಲೂ ಕೂಡಾ ಬಳ್ಳಾರಿ, ಬೆಳಗಾವಿ ಸೇರಿದಂತೆ ಬೇರೆ ಬೇರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ನಡೆದ ಬಾಣಂತಿಯರ ಸಾವಿನ ಪ್ರಕರಣ ಚರ್ಚೆ ನಡೆದಿತ್ತು. ಇದೀಗ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 20 ವರ್ಷದ ವೈಶಾಲಿ ಕೊಟಬಾಗಿ ಸಾವವನ್ನಪ್ಪಿದ್ದಾಳೆ.
ಬೆಳಗಾವಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಮುಂದುವರೆದಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ 20 ವರ್ಷದ ಬಾಣಂತಿ ಸಾನವನ್ನಪ್ಪಿದ್ದಾಳೆ ಎಂಬ ಆರೋಪ ಕೇಳಿ ಬರುತ್ತಿದೆ. ನಿನ್ನೆ ಬೆಳಗ್ಗೆ ಸೀಜರಿನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ವೈಶಾಲಿ ಕೊಟಬಾಗಿ, ಇಂದು ಬೆಳಗ್ಗೆಯವರೆಗೂ ಹುಷಾರಾಗಿಯೇ ಇದ್ದಳು, ಬೆಳಗ್ಗೆ 7 ಗಂಟೆಯಿಂದ ಎದೆನೋವು ಶುರುವಾಗಿದೆ ಎಂದು ವೈಶಾಲಿ ಹೇಳಿದ್ದಳು. ಎದೆ ನೋವಿನಿಂದ ಬಳಲುತ್ತಿದ್ದರೂ ಸಮರ್ಪಕ ಚಿಕಿತ್ಸೆ ನೀಡದ ಆರೋಪ ಬಾಣಂತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಬಾಣಂತಿ ವೈಶಾಲಿ ಪೋಷಕರ ಆಕ್ರೋಶ ಹೊಕಿದ್ದಾರೆ. ಹಾಗೂ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದಾರೆ. ಇನ್ನೂ ಎರಡು ದಿನಗಳ ಹಿಂದೆಯಷ್ಟೇ ವೈಶಾಲಿ, ಪತಿಯ ಜೊತೆ ಸಂಭ್ರಮದಿಂದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಳು.
PublicNext
22/12/2024 03:51 pm