ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರ ಮೇಲೆ ಅವಾಚ್ಯ ಶಬ್ದ ಬಳಕೆ ಆರೋಪದ ಮೇಲೆ ಬಂಧನವಾಗಿರುವ ಎಂಎಲ್‌ಸಿ ಸಿ.ಟಿ ರವಿ ಅವರನ್ನು ಇಂದು 11 ಗಂಟೆ ಸುಮಾರಿಗೆ ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಲಿದ್ದಾರೆ.
ರಾತ್ರಿಯಿಡೀ ಪೊಲೀಸ್ ವ್ಯಾನ್‌ನಲ್ಲಿ ಸಿ.ಟಿ ರವಿಯನ್ನು ಸುತ್ತಾಡಿಸಿದ ಪೊಲೀಸರು ಇಂದು ಬೆಳಗ್ಗೆ ಬೆಳಗಾವಿ ತಾಲೂಕಿನ ಆಯುಷ್ಮಾನ ಆರೋಗ್ಯ ಕೇಂದ್ರದಲ್ಲಿ ಸಿ.ಟಿ ರವಿ ಅವರ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಆರೋಗ್ಯ ತಪಾಸಣೆ ಬಳಿಕ ಬೆಳಗಾವಿ ತಾಲೂಕಿ ಮಚ್ಚಂಡಿಯಿಂದ ಸಾಂಬ್ರಾ ಏರ್‌ಪೋರ್ಟ್ ಕಡೆಗೆ ಪೊಲೀಸ್ ವಾಹನ ಹೊರಟಿದೆ. ಹೀಗೆ ಪದೇ ಪದೇ ಪೊಲೀಸರು ರೂಟ್ ಚೇಂಜ್ ಮಾಡಿ, ಸಿಟಿ ರವಿಯನ್ನು ಇನ್ನೂವರೆಗೆ ವ್ಯಾನ್‌ನಲ್ಲೆ ತಿರುಗಾಡಿಸುತ್ತಿದ್ದಾರೆ. ಇಂದು 11 ಗಂಟೆ ಸುಮಾರಿಗೆ ರವಿ ಅವರನ್ನು ಬೆಳಗಾವಿ ನ್ಯಾಯಲಕ್ಕೆ ಹಾಜರು ಪಡಿಸುವ ಸಾಧ್ಯತೆ ಇದ್ದು, ನ್ಯಾಯಾಲಯದ ಬಳಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
PublicNext
20/12/2024 10:44 am